fbpx
ಸಮಾಚಾರ

ಮತ್ತೆ ಸ್ಥಗಿತಗೊಳ್ಳುತ್ತಾ ‘ಕೆಜಿಎಫ್ 2’ ಚಿತ್ರೀಕರಣ? ರೌಡಿ ತಂಗಂ ತಾಯಿಯಿಂದ ಕೇಸ್.

ತೀವ್ರ ಕುತೂಹಲ ಕೆರಳಿಸಿರುವ ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ಮತ್ತೆ ಸಂಕಷ್ಟ ಎದುರಾಗಿದ್ದು, ಇದೀಗ ಚಿತ್ರದ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ ಎನ್ನಲಾಗಿದೆ.

ಮಾಧ್ಯಮವೊಂದು ವರದಿ ಮಾಡಿರುವಂತೆ ಈ ಸಿನಿಮಾದ ಕಥೆ ನಟೋರಿಯಸ್ ರೌಡಿ ತಂಗಂ ಕಥೆ ಹೋಲುತ್ತಿದೆ ಎಂದು ದೂರು ದಾಖಲಾಗಿದೆ. ಚಿತ್ರದಲ್ಲಿ ಬರುವ ಯಶ್ ಪಾತ್ರ ತಮ್ಮ ಮಗನ ನಿಜ ಜೀವನದ ಪಾತ್ರ ಹೋಲುತ್ತದೆ ಎಂದು ತಂಗಂ ತಾಯಿ ಪೌಳಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಕುಟುಂಬದ ಅನುಮತಿ ಇಲ್ಲದೇ ಕೆಜಿಎಫ್‌ ಚಾಪ್ಟರ್‌ 1ರಲ್ಲಿ ನನ್ನ ಮಗನ ನಿಜ ಜೀವನದ ಪಾತ್ರ ಬಳಸಿಕೊಳ್ಳಲಾಗಿದೆ ಎಂಬುದು ತಂಗಂ ತಾಯಿ ಪೌಳಿ ಆಪಾದನೆ. ಹೀಗಾಗಿ ‘ಕೆಜಿಎಫ್‌ ಚಾಪ್ಟರ್‌ 2’ಗೆ ತಡೆ ನೀಡಬೇಕೆಂದು ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಅಕ್ಟೋಬರ್‌ 9ಕ್ಕೆ ವಿಚಾರಣೆಗೆ ಹಾಜರಾಗುವಂತೆ ಚಿತ್ರ ತಂಡಕ್ಕೆ ಕೋರ್ಟ್‌ ಸಮನ್ಸ್ ನೀಡಿದೆ.

. ‘ಕೋಲಾರ’ ಮತ್ತು ‘ಕೆಜಿಎಫ್’ ಚಿತ್ರಗಳಲ್ಲಿ ತಂಗಂ ಜೀವನದ ವಿಚಾರಗಳು ಇವೆ. ಈ ಚಿತ್ರ ತಂಡಗಳಿಂದ ತಂಗಂ ಕುಟುಂಬಕ್ಕೆ ಅನ್ಯಾಯ ಆಗಿದೆ. ‘ಕೋಲಾರ’ ಚಿತ್ರ ತಂಡವು ₹ 10 ಲಕ್ಷ ನೀಡುವುದಾಗಿ ಹೇಳಿ ‌ಕೊನೆಗೆ ಕೇವಲ ₹ 4 ಲಕ್ಷ ನೀಡಿದೆ. ಕೆಜಿಎಫ್ ಚಿತ್ರ ತಂಡವು ಕುಟುಂಬವನ್ನು ಒಳ್ಳೆಯ ರೀತಿ ತೋರಿಸುವುದಾಗಿ ಹೇಳಿ, ಬೇರೆ ರೀತಿಯಲ್ಲಿ ತೋರಿಸಿದೆ. ಶೂಟಿಂಗ್ ಮಾಡಲು ಪೌಳಿ ಕುಟುಂಬದ ಅನುಮತಿ ಕೂಡ ಪಡೆದಿರಲಿಲ್ಲ ಎಂದು ವಕೀಲರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top