fbpx
ಸಮಾಚಾರ

ಸ್ಯಾಂಡಲ್‍ವುಡ್‍ ನಟನ ಗೂಂಡಾಗಿರಿ: ವ್ಯಕ್ತಿಯೊಬ್ಬನಿಗೆ ನಟನಿಂದ ಮಾರಣಾಂತಿಕ ಹಲ್ಲೆ.

ಕನ್ನಡ ಚಿತ್ರರಂಗದ ನಟನೊಬ್ಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ

ಟ್ರಂಕ್ ಎಂಬ ಚಿತ್ರದಲ್ಲಿ ನಟಿಸಿದ್ದ ನಟ ವಿಹಾರ್ ರಜಪೂತ್ ಅವರು ವಾಹನವನ್ನು ಪಾರ್ಕಿಂಗ್ ಮಾಡುವ ವಿಚಾರಕ್ಕೆ ಹರ್ಷ ಎಂಬ ಹೆಸರಿನ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದೀಗ ನಟನ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಇನ್ನು ಇದೆ ಪ್ರಕರಣದಲ್ಲಿ ಚಿತ್ರದ ನಿರ್ದೇಶಕಿ ಮೇಲೂ ಎಫ್ಐಆರ್ ದಾಖಲಾಗಿದೆ. ಈ ಘಟನೆ ಸೆಪ್ಟೆಂಬರ್ 19ರಂದು ನಡೆದಿದ್ದು ಈಗ ಬೆಳಕಿಗೆ ಬಂದಿದೆ.

 

 

ನಡೆದಿದ್ದೇನು?
ಸೆಪ್ಟೆಂಬರ್ 19ರ ಮಧ್ಯಾಹ್ನ ಪಾರ್ಕಿಂಗ್ ವಿಚಾರಕ್ಕೆ ಹರ್ಷ ಅವರ ಜೊತೆ ನಿರ್ದೇಶಕಿ ರಿಷಿಕಾಗೆ ಸಣ್ಣ ಜಗಳವಾಗಿತ್ತು. ಬಳಿಕ ರಿಷಿಕಾ ಘಟನೆಯನ್ನು ನಟ ವಿಜಾರ್ ಗೆ ಹೇಳಿದ್ದರು. ನಂತರ ನಿರ್ದೇಶಕಿ ರಿಷಿಕಾ ಪರವಾಗಿ ಫೋನ್ ಮಾಡಿದ್ದ ನಟ ನಿಹಾಲ್ ರಜಪೂತ್ ಹರ್ಷ ಅವರಿಗೆ ಜೀವ ಬೆದರಿಕೆ ಹಾಕಿದ್ದನು.

ಅಷ್ಟೇ ಅಲ್ಲದೇ ರಾತ್ರಿ ಸುಮಾರು 8.40ಕ್ಕೆ ಹರ್ಷ ಮನೆಯ ಬಳಿ 10ಕ್ಕೂ ಹೆಚ್ಚು ಮಂದಿ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿದ್ದನು. ಈ ವೇಳೆ ನಿಹಾಲ್ ರಾಡಿನಿಂದ ಹರ್ಷ ತಲೆಗೆ ಹಲ್ಲೆ ಮಾಡಿದ್ದನು ಎಂದು ದೂರಿನಲ್ಲಿ ದಾಖಲಾಗಿದೆ.

ನಟನಿಂದ ತಮಗೆ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹರ್ಷ ಪೊಲೀಸರಿಗೆ ದೂರು ನೀಡಿದ್ದರು. ಆದರೆ ವೈಯ್ಯಾಲಿಕಾವಲ್ ಪೊಲೀಸರು ಹಲ್ಲೆ ಮಾಡಿದವರನ್ನ ತೋರಿಸಿದರೂ ಹಲ್ಲೆಕೋರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಂತರ ಹರ್ಷ ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಕಮಿಷನರ್‌ಗೆ ಇ-ಮೇಲ್ ಮಾಡಿದ್ದರು. ಕಮಿಷನರ್ ಸೂಚನೆ ಮೇರೆಗೆ ವೈಯ್ಯಾಲಿಕಾವಲ್ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top