fbpx
ಸಮಾಚಾರ

ಯೂಟ್ಯೂಬ್ ನಲ್ಲಿದೆ ಒರಿಜಿನಲ್ ‘ಕಿಸ್’ ಚಿತ್ರ

ಕನ್ನಡ ಸಿನಿಮಾ ಪ್ರೇಕ್ಷಕರಲ್ಲಿ ಒಂದಷ್ಟು ಕುತೂಹಲ ಮೂಡಿಸಿದ್ದ ಎಪಿ ಅರ್ಜುನ್ ನಿರ್ದೇಶನದ ‘ಕಿಸ್’ ಸಿನಿಮಾ ಈ ಶುಕ್ರವಾರ ರಾಜ್ಯಾದ್ಯಂತ ತೆರೆಕಂಡಿದೆ. ಆದರೆ ಕಿಸ್ ಚಿತ್ರದ ಮೂಲ ಅವತರಣಿಕೆ ಯೂಟ್ಯೂಬ್ ನಲ್ಲೆ ಲಭ್ಯವಾಗಿಬಿಟ್ಟಿದೆ.. ರಿಲೀಸ್ ಆದ ಎರಡೇ ದಿನಕ್ಕೆ ಸಿನಿಮಾ ಪೈರಸಿ ಆಗಿಬಿಟ್ಟಿತಾ ಎಂದು ಕನ್ಪ್ಯೂಸ್ ಮಾಡ್ಕೋಬೇಡಿ ಏಕೆಂದರೆ ಕಿಸ್ ಸಿನಿಮಾ ಪೈರಸಿ ಆಗಿಲ್ಲ.. ಬದಲಾಗಿ ಇದು ಕದ್ದ ಮಾಲು ಎಂದು ಜಾಹೀರಾಗಿದೆ.

 

 

ಹೌದು, ಕಿಸ್ ಸಿನಿಮಾವನ್ನು ಕೋರಿಯನ್ ಭಾಷೆಯ ‘100 Days With Mr Arrogant’ ಎಂಬ ಸಿನಿಮಾದಿಂದ ರಿಮೇಕ್ ಮಾಡಿದ್ದಾರೆ ಎಂಬ ದೂರು ಕೇಳಿಬಂದಿದೆ. ಎರಡೂ ಚಿತ್ರಗಳ ಸಬ್ಜೆಕ್ಟ್, ಸ್ಟೋರಿಲೈನ್ ಒಂದೇ ರೀತಿ ಇದ್ದು ಕನ್ನಡ ನೇಟಿವಿಟಿಗೆ ತಕ್ಕಂತೆ ಚಿತ್ರಕತೆಯಷ್ಟೇ ಬದಲಾವಣೆ ಮಾಡಿಕೊಂಡು ಹಾಡು, ಫೈಟುಗಳನ್ನು ಸೇರಿಸಿಕೊಳ್ಳಲಾಗಿದೆ.

ಸಿನಿಮಾ ಬಿಡುಗಡೆಯಾಗುವವರೆಗೂ ‘ಕಿಸ್’ ಚಿತ್ರವನ್ನು ಅಪ್ಪಟ ಸ್ವಮೇಕ್ ಚಿತ್ರವೆಂದೇ ಭಾವಿಸಲಾಗಿತ್ತು. ನಿರ್ದೇಶಕ ಎಪಿ ಅರ್ಜುನ್ ಕೂಡ “ಇದೊಂದು ರಿಮೇಕ್ ಚಿತ್ರ ಅಥವಾ ಕೋರಿಯನ್ ಭಾಷೆಯ 100 Days With Mr Arrogant ಚಿತ್ರದ ಸ್ಪೂರ್ತಿಯಿಂದ ತಯಾರಿಸಿದ ಚಿತ್ರ” ಎಂದು ಎಲ್ಲಿಯೂ ಹೇಳಿರಲಿಲ್ಲ. ಈಗ ಸ್ವಮೇಕ್ ಸಿನಿಮಾ ಎಂದು ಭಾವಿಸಿ ಕಿಸ್ ಸಿನಿಮಾವನ್ನು ನೋಡಿದ ಮೇಲೆ ಮೂಲ ಚಿತ್ರವನ್ನು ನೋಡಿದ್ದ ಕೆಲ ಪ್ರೇಕ್ಷಕರು ಬೇಸರಗೊಂಡಿದ್ದಾರೆ.

ರೀಮೇಕ್ ಮಾಡಿದ್ದರೇ ನಮ್ಮದು ರೀಮೇಕ್ ಸಿನಿಮಾ ಎಂದು ಎಪಿ ಅರ್ಜುನ್ ಅವರು ಹೇಳಿಕೊಳ್ಳಬಹುದಿತ್ತು ಈ ರೀತಿ ಯಾವುದೊ ದೂರದ ದೇಶದ ಭಾಷೆಯಿಂದ ಸಿನಿಮಾವನ್ನು ಅಚ್ಚಿಳಿಸಿ ಕನ್ನಡ ಪ್ರೇಕ್ಷಕರನ್ನು ಮೂರ್ಖರನ್ನಾಗಿ ಮಾಡುವುದು ಸರಿಯೇ? ಈ ಪ್ರಶ್ನೆಗೆ ಎಪಿ ಅರ್ಜುನ್ ಅವರೇ ಉತ್ತರಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top