fbpx
ಸಮಾಚಾರ

ಈ ಭಾರಿಯ ಬಿಗ್‌ಬಾಸ್‌ಗೆ ಹೋಗಲಿರುವ ರವಿ ಬೆಳಗೆರೆ?

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಮತ್ತೊಂದು ಸೀಸನ್ನಿನ ಬಗ್ಗೆ ನಾನಾ ಗಾಸಿಪ್’ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.. ಬರೋಬ್ಬರಿ ಆರು ಸೀಸನ್ನುಗಳನ್ನು ಮುಗಿಸಿರುವ ಬಿಗ್ ಬಾಸ್ ಇದೀಗ ಏಳನೇ ಬಾರಿಗೆ ಕನ್ನಡ ಪ್ರೇಕ್ಷಕರ ಬಳಿಗೆ ಲಗ್ಗೆಯಿಡುತ್ತಿದೆ.. ಅಕ್ಟೋಬರ್ 13ರಿಂದ ಸೀಸನ್ ೭ ಪ್ರಾರಂಭವಾಗಲಿದೆ.

ಇಂಥಾ ಬಿಗ್ ಬಾಸ್ ಮನೆಗೆ ಈ ಭಾರಿ ಅವರು ಹೋಗ್ತಾರಂತೆ ಇವರು ಹೋಗ್ತಾರಂತೆ ಎಂಬಂತ ರೂಮರುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ಹರಿದಾಡುತ್ತಿದ್ದು ಅದರಲ್ಲಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರ ಹೆಸರು ಕೂಡ ಸೇರ್ಪಡೆಯಾಗಿದೆ..

ಸ್ಪರ್ಧಿಗಳ ವಿಚಾರವನ್ನು ಎಲ್ಲಿಯೂ ಬಿಟ್ಟುಕೊಡದೆ ಗೌಪ್ಯತೆ ಕಾಪಿಟ್ಟುಕೊಂಡಿರುವ ಬಿಗ್ ಬಾಸ್ ಟೀಮ್ ರವಿ ಬೆಳಗೆರೆ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಕೆಲ ಮೂಲಗಳ ಪ್ರಕಾರ ತಿಳಿದು ಬಂದಿದೆ. ಆದರೆ ರವಿ ಬೆಳಗೆರೆ ಸ್ಪರ್ಧಿಯಾಗಿ ಹೋಗುತ್ತಿಲ್ಲ ಬದಲಾಗಿ ವೈಲ್ಡ್‌ ಕಾರ್ಡ್‌ ಎಂಟ್ರಿ ರೂಪದಲ್ಲಿ ಏಳು ದಿನಗಳ ಕಾಲ ಮಾತ್ರ ದೊಡ್ಮನೆಯಲ್ಲಿ ಇರಲಿದ್ದಾರೆ ಎಂಬ ಮಾತಿದೆ.

ಅಂದಹಾಗೆ ಈ ಹಿಂದೆ ಬಿಗ್‌ ಬಾಸ್ ಸೀಸನ್- 3ರಲ್ಲಿ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಸ್ಪರ್ಧಿಸಿದ್ದು 10 ವಾರಗಳ ಕಾಲ ಮನೆಯಲ್ಲಿದ್ದರು.ಇದೀಗ ರವಿ ಬೆಳಗೆರೆ ಎಂಟ್ರಿ ಸುದ್ದಿ ಸಹಜವಾಗಿ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top