fbpx
ಸಮಾಚಾರ

ಐಎಎಸ್ ಅಧಿಕಾರಿ ಮಣ್ಣಿವಣ್ಣನ್ ಅವರ ಪ್ರಾಮಾಣಿಕ ಕೆಲಸದಿಂದ ಸಿಎಂರಿಂದ ಮನೆ ಪಡೆದ ವಯೋವರದ್ದೇ ಗಂಗಮ್ಮ

ಬ್ರಿಟೀಷರ ಕಾಲದಲ್ಲಿ ಮಿಲಿಟರಿ ಮ್ಯಾನ್ ಆಗಿದ್ದ ಎ.ಸುಬ್ಬನಾಯ್ಡು ರವರ ಪತ್ನಿ ಎ.ಎಸ್.ಗಂಗಮ್ಮ ಎಂಬ ಅಜ್ಕಿಗೆ ಕೊನೆಗೂ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿದ್ದಾರೆ. ಕಳೆದ ತಿಂಗಳು ರಾಜ್ಯದಲ್ಲಿ ಬಂದಿದ್ದ ಭಯಾನಕ ಪ್ರವಾಹದಿಂದ ವಯೋವೃದ್ಧೆ ಗಂಗಮ್ಮ ತಮ್ಮ ಮನೆಯನ್ನು ಕಳೆದುಕೊಂಡಿದ್ದರು.

ಗಂಗಮ್ಮ ಅವರು ಮನೆ ಕಳೆದುಕೊಂಡಿರುವ ವಿಚಾರವನ್ನು ಮಾಧ್ಯಮಗಳಲ್ಲಿ ನೋಡಿ ಅವರ ಬಳಿಗೆ ಧಾವಿಸಿದ್ದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ ಅಜ್ಜಿಗೆ ಮನೆಯನ್ನು ಮನೆ ನೀಡುವಂತೆ ಅವರು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದರು.  ಅಷ್ಟೇ ಅಲ್ಲದೆ ಅಜ್ಜಿಯನ್ನು ಮಾತನಾಡಿಸಿ ಧೈರ್ಯ ತುಂಬಿದ್ದರು, ಇದೀಗ ಈ ವಯೋವೃದ್ಧೆಗೆ ಮನೆ ಸಿಕ್ಕಿದೆ.

 

 

ಐಎಎಸ್ ಅಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ ಅವರು ಮಾಡಿದ್ದ ಮನವಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ಗಂಗಮ್ಮ ಅವರಿಗೆ ಮನೆಯ ನೀಡಿದ್ದಾರೆ. ಶಿವಮೊಗ್ಗ ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೆರೆಯಿಂದ ಮನೆಯನ್ನು ಕಳೆದುಕೊಂಡ ವಯೋವೃದ್ಧೆ ಗಂಗಮ್ಮ ಅವರಿಗೆ ಮನೆಯ ಹಕ್ಕುಪತ್ರ ವಿತರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top