ಯಡಿಯೂರಪ್ಪನವರ ರೆಕ್ಕೆ ಪುಕ್ಕವನ್ನು ಬಿಜೆಪಿ ಹೈಕಮಾಂಡ್ ಕತ್ತರಿಸಿ ಬಿಟ್ಟಿದೆ. ಪ್ರತಿ ದಿನವೂ ಅವರಿಗೆ ಸ್ವಪಕ್ಷದವರೇ ಕಿರುಕುಳ ನೀಡುತ್ತಿದ್ದಾರೆ. ರಾಜ್ಯದ ಸಮಸ್ಯೆ ಬಗ್ಗೆ ಮಾತನಾಡಲು ಅವರಿಗೆ ಅವಕಾಶವನ್ನು ಸಹ ನೀಡುತ್ತಿಲ್ಲ. ಪಾಪ, ಯಡಿಯೂರಪ್ಪನವರನ್ನು ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ.,” ಎಂಬುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ಟೀಟ್ ಮಾಡಿ ಅನುಕಂಪ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪನವರ ರೆಕ್ಕೆ ಪುಕ್ಕವನ್ನು ಬಿಜೆಪಿ ಹೈಕಮಾಂಡ್ ಕತ್ತರಿಸಿ ಬಿಟ್ಟಿದೆ. ಪ್ರತಿ ದಿನವೂ ಅವರಿಗೆ ಸ್ವಪಕ್ಷದವರೇ ಕಿರುಕುಳ ನೀಡುತ್ತಿದ್ದಾರೆ. ರಾಜ್ಯದ ಸಮಸ್ಯೆ ಬಗ್ಗೆ ಮಾತನಾಡಲು ಅವರಿಗೆ ಅವಕಾಶವನ್ನು ಸಹ ನೀಡುತ್ತಿಲ್ಲ.
ಪಾಪ, ಯಡಿಯೂರಪ್ಪನವರನ್ನು ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ.— Siddaramaiah (@siddaramaiah) September 30, 2019
ಇದೆ ವೇಳೆ “ಪ್ರವಾಹದಿಂದ ಅತಿ ಹೆಚ್ಚು ಹಾನಿಗೀಡಾಗಿರುವುದು ಬೆಳಗಾವಿ ಜಿಲ್ಲೆ, ನಂತರ ಬಾಗಲಕೋಟೆ, ರಾಯಚೂರು, ಗದಗ ಹೀಗೆ ಸಾಕಷ್ಟು ನಷ್ಟಕ್ಕೆ ಈಡಾಗಿವೆ. ಪ್ರತಿ ತಿಂಗಳು ಸಂತ್ರಸ್ತರಿಗೆ ಮನೆ ಬಾಡಿಗೆ ರೂಪದಲ್ಲಿ ರೂ.5000 ಕೊಡಲಾಗುತ್ತಿದೆ. ಹಳ್ಳಿಗಳಲ್ಲಿ ಮನೆ ಬಾಡಿಗೆಗೆ ಸಿಗುತ್ತದೆಯೇ? ಮನೆ ಕಳೆದುಕೊಂಡವರು ಮುಂದಿನ ಹತ್ತು ತಿಂಗಳು ಎಲ್ಲಿ ವಾಸಿಸಬೇಕು?,” ಎಂಬುದಾಗಿ ಅವರು ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರವಾಹದಿಂದ ಅತಿ ಹೆಚ್ಚು ಹಾನಿಗೀಡಾಗಿರುವುದು ಬೆಳಗಾವಿ ಜಿಲ್ಲೆ, ನಂತರ ಬಾಗಲಕೋಟೆ, ರಾಯಚೂರು, ಗದಗ ಹೀಗೆ ಸಾಕಷ್ಟು ನಷ್ಟಕ್ಕೆ ಈಡಾಗಿವೆ ಪ್ರತಿ ತಿಂಗಳು ಸಂತ್ರಸ್ತರಿಗೆ ಮನೆ ಬಾಡಿಗೆ ರೂಪದಲ್ಲಿ ರೂ.5000 ಕೊಡಲಾಗುತ್ತಿದೆ. ಹಳ್ಳಿಗಳಲ್ಲಿ ಮನೆ ಬಾಡಿಗೆಗೆ ಸಿಗುತ್ತದೆಯೇ? ಮನೆ ಕಳೆದುಕೊಂಡವರು ಮುಂದಿನ ಹತ್ತು ತಿಂಗಳು ಎಲ್ಲಿ ವಾಸಿಸಬೇಕು?
— Siddaramaiah (@siddaramaiah) September 30, 2019
ಸಂತ್ರಸ್ತರ ಪರಿಹಾರ ವಿಚಾರದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ಚಂದ್ರಯಾನ – 2 ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ದಿನ ಬೆಂಗಳೂರಿಗೆ ಆಗಮಿಸಿದ್ದ ನರೇಂದ್ರ ಮೋದಿಯವರನ್ನು ಭೇಟಿಯಾಗಲು ಅವಕಾಶ ನೀಡುವಂತೆ ಕಾಂಗ್ರೆಸ್ ಪಕ್ಷದ ವತಿಯಿಂದ ಪತ್ರ ಬರೆದಿದ್ದೆವು. ಆದರೆ ಭೇಟಿಗೆ ಅವಕಾಶ ನೀಡಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಮೋದಿಯವರ ಬಳಿ ಮಾತನಾಡುವ ಧೈರ್ಯವಿಲ್ಲ. ರಾಜ್ಯದ ಸಮಸ್ಯೆ ಬಗೆಹರಿಯುವುದು ಹೇಗೆ?,” ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ನೀಡಿದ್ದ ಅನುದಾನವನ್ನು ಯಡಿಯೂರಪ್ಪ ಅವರು ಕಡಿತ ಮಾಡಿದ್ದಾರೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ ಕಾಮಗಾರಿಗಳಿಗೆ ನಿಗದಿ ಮಾಡಿದ್ದ ಅನುದಾನವನ್ನೂ ವಾಪಸ್ ಪಡೆದಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಇಂತಹ ದ್ವೇಷದ ರಾಜಕೀಯ ಸರಿಯಲ್ಲ.
— Siddaramaiah (@siddaramaiah) September 30, 2019
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
