fbpx
ಸಮಾಚಾರ

ಬಿಗ್​​ ಬಾಸ್​​ ಮನೆಗೆ ಸರಿಗಮಪ ‘ಹನುಮಂತ’ ಎಂಟ್ರಿ ಪಕ್ಕಾ!

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಮತ್ತೊಂದು ಸೀಸನ್ನಿನ ಬಗ್ಗೆ ನಾನಾ ಗಾಸಿಪ್’ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.. ಬರೋಬ್ಬರಿ ಆರು ಸೀಸನ್ನುಗಳನ್ನು ಮುಗಿಸಿರುವ ಬಿಗ್ ಬಾಸ್ ಇದೀಗ ಏಳನೇ ಬಾರಿಗೆ ಕನ್ನಡ ಪ್ರೇಕ್ಷಕರ ಬಳಿಗೆ ಲಗ್ಗೆಯಿಡುತ್ತಿದೆ.. ಅಕ್ಟೋಬರ್ 13ರಿಂದ ಸೀಸನ್ ೭ ಪ್ರಾರಂಭವಾಗಲಿದೆ.

ಇಂಥಾ ಬಿಗ್ ಬಾಸ್ ಮನೆಗೆ ಈ ಭಾರಿ ಅವರು ಹೋಗ್ತಾರಂತೆ ಇವರು ಹೋಗ್ತಾರಂತೆ ಎಂಬಂತ ರೂಮರುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ಹರಿದಾಡುತ್ತಿದ್ದು ಅದರಲ್ಲಿ ಸರಿಗಮಪ ಖ್ಯಾತಿಯ ಹನುಮಂತ ಅವರ ಹೆಸರು ಕೂಡ ಸೇರ್ಪಡೆಯಾಗಿದೆ..

ಹನುಮಂತಪ್ಪ ತಮ್ಮದೇ ಆದ ಶೈಲಿ ಹಾಡುತ್ತಾರೆ. ನೇರ ಮಾತು, ಹಳ್ಳಿ ಸೊಗಡು ಹೀಗೆ ಎಲ್ಲದರಿಂದಲೂ ಹೆಸರು ಮಾಡಿದ್ದಾರೆ. ಇವರು ಹಾಡು ಜೊತೆಗೆ ಜನ ಮುಗ್ದತೆಯನ್ನು ಇಷ್ಟಪಡುತ್ತಾರೆ. ಎಲ್ಲೋ ಹಳ್ಳಿಯಲ್ಲಿದ್ದ ಈ ಹಾಡುಗಾರ ಇಂದು ಇಡೀ ಕರ್ನಾಟಕದ ಮನೆ ಮಾತಾಗಿದ್ದಾರೆ. ಈ ಮುಗ್ದ ಹಾಡುಗಾರ ಈಗ ಬಿಗ್​ ಬಾಸ್​​ ಮನೆಗೂ ಕೊಡುತ್ತಿದ್ದಾರೆ.

ಈ ಭಾರಿ ಕಲರ್ಸ್ ಕನ್ನಡಲ್ಲಿ:
ಕಳೆದ ಬಾರಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರವಾಗಿತ್ತು. ಅದಕ್ಕಿಂತ ಮೊದಲು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಈ ಬಾರಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಆ ಮೂಲಕ ಮತ್ತೆ ಆರಂಭದ ಎರಡು ಆವೃತ್ತಿಗಳಲ್ಲಿ ಪ್ರಸಾರವಾದ ಕಲರ್ಸ್ ವಾಹಿನಿಯಲ್ಲೇ ಮತ್ತೆ ಪ್ರಸಾರವಾಗುತ್ತಿದೆ.

ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಬಿಗ್ ಬಾಸ್ ಶೋನ ಏಳನೇ ಅವತರಣಿಕೆಗೆ ಈಗಾಗಲೇ ಸ್ಪರ್ಧಿಗಳನ್ನು ಆಯ್ಕೆಯ ಪ್ರಕ್ರಿಯೆ ನಡೆಯುತ್ತಿದ್ದು ಅದಕ್ಕೆ ಸಂಭಂದಪಟ್ಟ ಕೆಲಸಗಳನ್ನೂ ಈಗಾಗಲೇ ಶುರುವಿಟ್ಟುಕೊಂಡಿದ್ದರಂತೆ..ಈ ಮೂಲಕ ಎಲ್ಲೋ ಒಂದಿಷ್ಟು ಮಂದಿ ಪ್ರತಿಭಾವಂತರು, ರಿಟೇರ್‍ಮೆಂಟ್ ಸ್ಟೇಜಿನ ಕಲಾವಿದರು ಮತ್ತು ಕೆಲವೊಂದಷ್ಟು ತಿಕ್ಕಲುತಾಣಗಳು, ಅಸಹ್ಯಕಾರಿ ಸಣ್ಣತನಗಳನ್ನು ಮತ್ತೊಮ್ಮೆ ನೋಡೋ ಕಾಲ ಬರುತ್ತಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top