fbpx
ಸಮಾಚಾರ

“ಉತ್ತರ ಕರ್ನಾಟಕ ಕೂಡ ಭಾರತದಲ್ಲೇ ಇದೆ” ಕೇಂದ್ರದ ವಿರುದ್ಧ ಕನ್ನಡಿಗರ ಅಭಿಯಾನ

ಕರ್ನಾಟಕದಲ್ಲಿ ಮಹಾ ಪ್ರವಾಹ ಬಂದು ಬರೋಬ್ಬರಿ 2 ತಿಂಗಳೇ ಕಳೆದಿದೆ. ಹೀಗಿದ್ದರೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ಅಸದ್ಯ ಕೇಂದ್ರದ ಈ ನಿರ್ಲಕ್ಷ್ಯದಿಂದ ಬೇಸತ್ತ ಕನ್ನಡಿಗರು ಟ್ವಿಟರ್‌ನಲ್ಲಿ ವಿನೂತನ ಅಭಿಯಾನವೊಂದನ್ನು ಆರಂಭಿಸಿದ್ದಾರೆ.

ಕೇಂದ್ರದ ಈ ನಡೆಯಿಂದ ಬೇಸತ್ತ ಜನ ಸದ್ಯ ಟ್ವಿಟರ್ ನಲ್ಲಿ #NorthKarnatakaBelongsToIndia ಎಂಬ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಅತ್ತ ಗುಜರಾತ್ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದ್ದು, ಕರ್ನಾಟಕದ ವಿಚಾರವಾಗಿ ಯಾಕಿಷ್ಟು ಮೌನ ವಹಿಸಿದೆ ಎಂದು ಪ್ರಶ್ನಿಸಲಾರಂಭಿಸಿದ್ದಾರೆ. ಈ ಹ್ಯಾಷ್ ಟ್ಯಾಗ್ ಟ್ರೆಂಡ್ ಮೂಡಿಸಿದ್ದು, ಸಾವಿರಾರು ಮಂದಿ ಟ್ವೀಟ್ ಮಾಡಿ ಪರಿಹಾರ ಒದಗಿಸುವಂತೆ ಒತ್ತಾಯಿಸುತ್ತಿದ್ದಾರೆ.

#NorthKarnatakaBelongsToIndia, ಉತ್ತರ ಕರ್ನಾಟಕವೂ ಭಾರತದ ಭಾಗ ಎಂಬ ಅಭಿಯಾನದಡಿ ಟ್ವೀಟ್ ಮಾಡುತ್ತಿರುವ ನೆಟ್ಟಿಗರು, ಕೇಂದ್ರ ಸರ್ಕಾರ ಪರಿಹಾರ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಮಲತಾಯಿ ಧೋರಣೆ ತೋರಿಸಬೇಡಿ, ತೆರಿಗೆ ನಾವು ಕಟ್ಟುತ್ತೇವೆ ಈಗ ಪರಿಹಾರ ನೀಡಿ ಎಂಬಿತ್ಯಾದಿ ಟ್ವೀಟ್ ಮಾಡಿದ್ದಾರೆ.

ಪರಿಹಾರ ಘೋಷಣೆಯಲ್ಲಿಕೇಂದ್ರ ಹಾಗೂ ರಾಜ್ಯ ಸರಕಾರ ತಾರತಮ್ಯ ಅನುಸರಿಸುತ್ತಿವೆ. ಅಲ್ಲದೆ, ರಾಜ್ಯ ಸರಕಾರ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಈ ಭಾಗದ ಜನರು ಏನೇ ಪಡೆಯುವುದಿದ್ದರೂ ಹೋರಾಟ ಮಾಡಿಯೇ ಪಡೆಯಬೇಕಾದ ಪರಿಸ್ಥಿತಿ ಎದುರಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ಪ್ರವಾಹ ಸಂತ್ರಸ್ತರು ದೂರುತ್ತಿದ್ದಾರೆ.

ನೆರೆಯಿಂದ ಈ ಭಾಗದ ಜನರು ಮನೆ, ಜಾನುವಾರು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದೆ. ಈ ಸಂದರ್ಭದಲ್ಲಿಅವರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ನಿಲ್ಲಬೇಕು. ಕೇಂದ್ರ ಸರಕಾರ ಕೇವಲ ಸಮೀಕ್ಷೆ ಮಾಡುತ್ತಿದೆ. ಆದರೆ ಪರಿಹಾರ ಮಾತ್ರ ಬಿಡುಗಡೆ ಮಾಡುತ್ತಿಲ್ಲ. ಇನ್ನು ರಾಜ್ಯ ಸರಕಾರ ಅಲ್ಪಮಟ್ಟಿನ ಹಣ ಬಿಡುಗಡೆ ಮಾಡಿದೆಯಾದರೂ, ಇದು ನೆರೆ ಪೀಡಿತ ಹೊಸ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top