fbpx
ಸಮಾಚಾರ

ಶ್ರೀಲಂಕಾ ಗಾಯಕಿಯ ಕನ್ನಡ ಹಾಡಿಗೆ ಕನ್ನಡಿಗರು ಫಿದಾ..!

ಸಾಮಾನ್ಯವಾಗಿ ಪರಭಾಷೆಯ ಹೊಸ ಗಾಯಕರು ಕನ್ನಡದ ಚಿತ್ರಗೀತೆಗಳನ್ನು ಹಾಡಲು ಹಿಂದೇಟು ಹಾಕುತ್ತಾರೆ. ಅದರೆ ಶ್ರೀಲಂಕಾದ ಗಾಯಕಿಯೊಬ್ಬರು ತಮ್ಮ ದೇಶದಲ್ಲಿಯೇ ಕನ್ನಡದ ಹಾಡನ್ನು ಹಾಡಿ ಕನ್ನಡಿಗರ ಮೆಚ್ಚುಗೆಗೆ ಕಾರಣವಾಗಿದೆ.

 

 

ಶ್ರೀಲಂಕಾ ಗಾಯಕಿ ಹನ್ಸಿನಿ ವಿಮಲ್ಸಿರಿ ‘ಕೆಜಿಎಫ್’ ಸಿನಿಮಾದ ಅಮ್ಮನ ಮಮತೆಯನ್ನು ಹಾಡಿಹೊಗಳುವ ‘ಗರ್ಭದಿ ನನ್ನಿರಿಸಿ..’ ಹಾಡನ್ನು ತಮ್ಮ ಇಂಪಾದ ಧ್ವನಿಯೊಂದಿಗೆ ಹಾಡಿದ್ದಾರೆ. ಅಷ್ಟೇ ಅಲ್ಲದೆ ಹನ್ಸಿನಿ ಅದನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ. ಕೋಕ್ ಸ್ಟುಡಿಯೋ ಮಾದರಿಯಲ್ಲಿ ಲಂಕಾದಲ್ಲಿ ಮೂಡಿ ಬರುತ್ತಿರುವ Ambient Luxe Season 1 ನಲ್ಲಿ ಈ ಹಾಡನ್ನು ಹಾಡಲಾಗಿದ್ದು, ಇದೀಗ ಲಂಕನ್ ಗಾಯಕಿಯ ಮಾಧುರ್ಯಕ್ಕೆ ಕನ್ನಡಗಿರು ಫಿದಾ ಆಗಿದ್ದಾರೆ.

ಕನ್ನಡ ಬರದೆ ಇದ್ದರೂ ಸ್ಪಷ್ಟವಾಗಿ ಕನ್ನಡ ಹಾಡನ್ನು ಹಾಡಿರುವ ಹನ್ಸಿನಿ ವಿಮಲ್ಸಿರಿ ತಮ್ಮ ಇಂಪಾದ ಧ್ವನಿಯ ಮೂಲಕ ಗಮನ ಸೆಳೆದಿದ್ದಾರೆ. ಯಶ್ ಅಭಿಮಾನಿಗಳು ಮಾತ್ರವಲ್ಲದೆ, ಅನೇಕ ಕನ್ನಡಿಗರು ಹನ್ಸಿನಿ ವಿಮಲ್ಸಿರಿ ಗಾಯನವನ್ನು ಮೆಚ್ಚಿಕೊಂಡಿದ್ದಾರೆ. ಸದ್ಯ ಹಾಡನ್ನು ಈಗಾಗಲೇ 5 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top