fbpx
ಸಮಾಚಾರ

“ನಮ್ಮ ತಂದೆಗೆ ಹೈಕಮಾಂಡ್ ತುಂಬಾ ಟೈಟ್ ಮಾಡ್ತಿರೋದು ನಿಜ” ವಿಜಯೇಂದ್ರ ಸ್ಪಷ್ಟನೆ.

ಹೈಕಮಾಂಡ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತುಂಬಾ ಟೈಟ್ ಮಾಡುತ್ತಿರುವುದು ನಿಜ ಎಂದು ಬಿಎಸ್‍ವೈ ಪುತ್ರ, ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅವರು ಸ್ಪಷ್ಟಪಡಿಸಿದರು.

ಸಿದ್ಧಗಂಗಾ ಮಠಕ್ಕೆ ಮಂಗಳವಾರ ಭೇಟಿ ನೀಡಿ, ಲಿಂ.ಡಾ.ಶಿವಕುಮಾರ ಸ್ವಾಮಿಗಳ ಗದ್ದುಗೆ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ “ಬಿಜೆಪಿಗೆ ದಕ್ಷಿಣ ಭಾರತದ ಹೆಬ್ಟಾಗಿಲು ಕರ್ನಾಟಕ. ಇಲ್ಲಿ ಉತ್ತಮ ಆಡಳಿತವನ್ನು ನೀಡಬೇಕು ಎನ್ನುವ ಕಾರಣದಿಂದ ಹೈಕಮಾಂಡ್‌, ಯಡಿಯೂರಪ್ಪ ಅವರ ಅಧಿಕಾರದ ಮೇಲೆ ಟೈಟ್‌ ಮಾಡುತ್ತಿದೆ.” ಎಂದಿದ್ದಾರೆ.

ಇನ್ನು ರಾಜಕೀಯ ಹಸ್ತಕ್ಷೇಪದ ಕುರಿತು ಮಾತನಾಡಿದ ವಿಜಯೇಂದ್ರ “ಯಡಿಯೂರಪ್ಪ ಅವರು ಪುಕ್ಸಟ್ಟೆ ಮುಖ್ಯಮಂತ್ರಿಯಾಗಿಲ್ಲ. ೩೦-೪೦ ವರ್ಷಗಳ ಹೋರಾಟದ ಬಳಿಕ ಈ ಸ್ಥಾನಕ್ಕೆ ಬಂದಿದ್ದಾರೆ.‌ಅವರಿಗೆ ಅದರ‌ ಮಹತ್ವ ಹಾಗೂ ಗೌರವ ಎರಡೂ ಅರಿವಿದೆ. ಹೀಗಾಗಿ ನಾವು ಯಾವುದೇ ರೀತಿಯ ಹಸ್ತಕ್ಷೇಪ ಮಾಡುತ್ತಿಲ್ಲ” ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top