fbpx
ಸಮಾಚಾರ

ಮೈಸೂರು ಜನರಲ್ಲಿ ಕ್ಷಮೆಯಾಚಿಸಿದ ಗಾಯಕಿ ರಾನು ಮಂಡಲ್

ನೆನ್ನೆ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಯುವ ದಸರಾ ಉದ್ಘಾಟನೆ ಆಯಿತು. ಉದ್ಘಾಟನಾ ಕಾರ್ಯಕ್ರಮಕ್ಕೆ ಇಂಟರ್ನೆಟ್ ಸೆನ್ಸೇಷನ್ ಸಿಂಗರ್ ರಾನು ಮೊಂಡಲ್ ಅವರು ಆಗಮಿಸಬೇಕಿತ್ತು. ಆದರೆ ರಾನು ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.

ಈ ಹಿನ್ನಲೆಯಲ್ಲಿ ಮೈಸೂರು ಜನರಲ್ಲಿ ಕ್ಷಮೆಯಾಚಿಸಿರುವ ರಾನು ಅವರು, “ನಮಸ್ತೆ. ಮೈಸೂರು ದಸರಾಗೆ ನೀವು ನನಗೆ ಆಹ್ವಾನ ನೀಡಿದ್ದೀರಿ. ಆದರೆ ಇಂದು ನನಗೆ ಬರಲು ಆಗಲಿಲ್ಲ. ಏಕೆಂದರೆ ನನಗೆ ಅನಾರೋಗ್ಯವಿದೆ. ಹೀಗಾಗಿ ನಾನು ಬರಲು ಆಗುತ್ತಿಲ್ಲ. ನಾನು ಬರದೇ ಇರುವುದಕ್ಕೆ ಕ್ಷಮೆ ಕೇಳುತ್ತೇನೆ. ಮುಂದಿನ ಬಾರಿ ನನ್ನ ಕರೆದರೆ ನಾನು ಬರುತ್ತೇನೆ” ಎಂದು ಹಿಂದಿಯಲ್ಲಿ ಹೇಳಿದ್ದಾರೆ.

ಮೈಸೂರು ದಸರಾ ಹಬ್ಬದ ಅಂಗವಾಗಿ ಯುವ ದಸರಾ ಉದ್ಘಾಟನೆ ದಿನವಾದ ಇಂದು ರಾನು ಮಂಡಲ್ ಆಹ್ವಾನಿಸಿ ಕಾರ್ಯಕ್ರಮ ನೀಡಲು ಈ ಬಾರಿ ಮೈಸೂರು ಜಿಲ್ಲಾಡಳಿತ ಸಜ್ಜಾಗಿತ್ತು. ಮನೆಯಿಂದ ಕೋಲ್ಕತ್ತಾ ಏರ್ ಪೋರ್ಟ್ ಗೆ ಬರುವಾಗ ಅತಿಯಾದ ವಾಂತಿಯಾದ ಕಾರಣ ರಾನು ಮಂಡಾಲ್ ಬಂಗಾಳದಲ್ಲೇ ಉಳಿದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top