fbpx
ಸಮಾಚಾರ

ಬೆಂಗಳೂರಿಗೆ ಮಾರ್ವಾಡಿ ಮೇಯರ್: #wewantkannadigamayor ಅಭಿಯಾನ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ಗೌತಮ್ ಕುಮಾರ್ ಆಯ್ಕೆಗೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೌತಮ್ ಅವರು ಮೇಯರ್ ಆಗಿದ್ದನ್ನು ವಿರೋಧಿಸಿ ಕನ್ನಡಿಗರು ಟ್ವಿಟ್ಟರ್ ಅಭಿಯಾನ ನಡೆಸುತ್ತಿದ್ದಾರೆ. ನಿನ್ನೆ ಸಂಜೆ ವಿ ವಾಂಟ್ ಕನ್ನಡಿಗ ಮೇಯರ್ (#wewantkannadigamayor) ಎಂಬ ಹ್ಯಾಷ್‌ಟ್ಯಾಗ್‌ ಟ್ವಿಟರ್​ನಲ್ಲಿ ನಂ 1 ಟ್ರೆಂಡಿಂಗ್ ಆಗಿದೆ.

‘ಬೆಂಗಳೂರು ನಗರಕ್ಕೆ ಮಾರ್ವಾಡಿ ಒಬ್ಬರನ್ನು ಮೇಯರ್‌ ಆಗಿ ಬಿಜೆಪಿ ಆಯ್ಕೆ ಮಾಡಿದೆ. ಬೆಂಗಳೂರು ಕೆಂಪೇಗೌಡರು ಸ್ಥಾಪಿಸಿರುವ ಮಹಾನಗರ. ಕನ್ನಡಿಗರ ರಾಜಧಾನಿ. ಇಲ್ಲಿ ಅಚ್ಚ ಕನ್ನಡಿಗರು ಅಧಿಕಾರ ಚಲಾಯಿಸಬೇಕು. ಆದರೆ, ಇದೀಗ ಈ ನಗರ ಮಾರ್ಮಾಡಿಗರು, ಪರ ಭಾಷಿಕರ ಕೈಗೆ ಹೋಗುತ್ತಿದೆ’ ಎಂದು ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

“ಕನ್ನಡಿಗರ ಕೆಲಸಗಳು – ಹೊರ ರಾಜ್ಯದವರ ಪಾಲಾದವು. ಕನ್ನಡಿಗರು ಕಟ್ಟಿದ ಬ್ಯಾಂಕ್ ಗಳು -ಹೊರ ರಾಜ್ಯದವರ ಪಾಲಾದವು. ಕನ್ನಡಿಗರ ರಾಜ್ಯಸಭೆ ಸದಸ್ಯತ್ವ – ಹೊರ ರಾಜ್ಯದವರ ಪಾಲಾದವು. ಬೆಂಗಳೂರಿನ ಮೇಯರ್ ಹೊರ ರಾಜ್ಯದವರ ಪಾಲಾಯ್ತು. ಈಗ ಬೆಂಗಳೂರನ್ನೇ ಹೊರ ರಾಜ್ಯದವರಿಗೆ ಕೊಟ್ಟು ಬಿಟ್ಟರು ” ಎಂದು ಕನ್ನಡಿಗರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ,

“ಇವತ್ತು ಕನ್ನಡಿಗರು ಎಲ್ಲಾ ಇದ್ದು ಅದನ್ನು ತಮ್ಮಹಿಡಿತದಲ್ಲಿ ಇಟ್ಟುಕೊಳ್ಳಲಾಗದೆ ಎಲ್ಲಾ ಅನ್ಯಭಾಷಿಕರ ಕೈಗೆ ಕೊಟ್ಟು ಚಪ್ಪಾಳೆ ತಟ್ಟುತ್ತಾ ಕೂರುವ ಪರಿಸ್ಥಿತಿ ತಂದುಕೊಂಡಿರೋದು ಶೋಚನೀಯ. ನಮ್ಮ ನಿರಾಭಿಮಾನ ಎಲ್ಲಿಗೆ ಬಂದಿದೆ ಅಂದ್ರೆ ಅಧಿಕಾರವನ್ನೇ ಇನ್ನೊಬ್ಬರ ಕೈಗೆ ಕೊಡುವಷ್ಟರ ಮಟ್ಟಿಗೆ ಅಂದ್ರೆ ನಾಚಿಕೆ ಆಗ್ಬೇಕು.” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top