fbpx
ಸಮಾಚಾರ

ಮಯಾಂಕ್ ಅಗರ್​ವಾಲ್​ ಭರ್ಜರಿ ಡಬಲ್ ಸೆಂಚುರಿ- ಬೃಹತ್ ಮೊತ್ತದತ್ತ ಟೀಮ್ ಇಂಡಿಯಾ!

ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಓಪನರ್ ಹೆಮ್ಮೆಯ ಕನ್ನಡಿಗ ಮಾಯಾಂಕ್ ಅಗರ್ವಾಲ್ ಅವರು ಭರ್ಜರಿ ದ್ವಿಶತಕ ಭಾರಿಸಿದ್ದಾರೆ..

 

 

ಬುಧವಾರ ಭಾರತ 59.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 202 ರನ್ ಹೊಡೆದಿದ್ದ ಸಂದರ್ಭದಲ್ಲಿ ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಮ್ಯಾಚ್​ನ ಎರಡನೇ ದಿನವಾದ ಇಂದು 84ರನ್​​ ನಿಂದ ಆಟ ಮುಂದುವರೆಸಿದ್ದ ಅಗರ್​ವಾಲ್​ ಆರಂಭದಲ್ಲಿ ಸೆಂಚುರಿ ಪೂರೈಸಿದ್ದರು.

ಬಳಿಕವೂ ತಾಳ್ಮೆ ಕಳೆದುಕೊಳ್ಳದೆ ಆಟ ಮುಂದುವರೆಸಿದ ಅವರು ದ್ವಿಶತಕ ಸಿಡಿಸಿದ್ದಾರೆ. 358 ಎಸೆತಗಳಲ್ಲಿ 22 ಬೌಂಡರಿ ಹಾಗೂ 5 ಸಿಕ್ಸರ್ ಚಚ್ಚಿ ಅಗರ್ವಾಲ್ ಡಬಲ್ ಸೆಂಚುರಿ ಬಾರಿಸಿ ಕ್ರೀಸ್ ನಲ್ಲಿ ಇನ್ನೂ ಆಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top