fbpx
ಸಮಾಚಾರ

“ಮೋದಿ ಹೆಸರೇಳದಿದ್ದರೆ ಅವರ ಭಾಷಣ ಕೇಳಲು ಯಾರು ಬರೋಲ್ಲ” ಸೂಲಿಬೆಲೆ ವಿರುದ್ಧ ಸಿಂಹ ಘರ್ಜನೆ.

ಪರಿಹಾರ ನೀಡುವಂತೆ ಮೋದಿ ಅವರನ್ನು ಕೇಳಿ ಎಂದು ಹೇಳಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧವೇ ಮೈಸೂರು ಸಂಸದ ಪ್ರತಾಪ್ ಸಿಂಹ ಅಸಮಾಧಾನಗೊಂಡಿದ್ದಾರೆ. “ನಾವು ಪ್ರಧಾನಿ ಮೋದಿಯಿಂದ ಗೆದ್ದಿದ್ದೇವೆ ಎಂದು ಹೇಳುವವರಿಗೆ ಮೋದಿಯೇ ಬಂಡವಾಳ” ಎಂದು ಹೇಳುವ ಮೂಲಕ ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಚಕ್ರವರ್ತಿ ಸೂಲಿಬೆಲಿ ವಿರುದ್ಧ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ಮಾತನಾಡಿರುವ ಪ್ರತಾಪ್ ಸಿಂಹ, ಈಗ ಮೋದಿ ವಿರುದ್ಧ ಮಾತನಾಡುತ್ತಿರುವವರ ಭಾಷಣಕ್ಕೆ ಮೋದಿಯೇ ಬಂಡವಾಳ ಅವರಿಗೆ ಮೋದಿಯೇ ಐಡೆಂಟಿಟಿ. ಮೋದಿ ಹೆಸರೇಳದಿದ್ದರೆ ಅವರ ಭಾಷಣ ಕೇಳಲು ಯಾರು ಬರುತ್ತಾರೆ ಎಂದು ತೀಕ್ಷ್ಣವಾಗಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಿಡಿಕಾರಿದರು.

“ಮೋದಿಯವರ ಬಗ್ಗೆ ನಾನು ಯಾರಿಂದಲೂ ನಿಷ್ಠೆ ಕಲಿಯುವ ಅಗತ್ಯವಿಲ್ಲ. 2004ರಿಂದಲೂ ನಾನು ಮೋದಿ ಅವರನ್ನು ಸಮರ್ಥಿಸಿಕೊಂಡೆ ಬರುತ್ತಿದ್ದೇನೆ. ಇವರು ಭಾಷಣ ಶುರುಮಾಡುವುದಕ್ಕಿಂತ ಮುಂಚೆಯೇ ಮೋದಿಯವರ ಆತ್ಮಕಥೆ ಬರೆದಿದ್ದೆ.” ಎಂದು ಸಮಜಾಯಿಸಿ ನೀಡಿದರು.

ನಾವೆಲ್ಲಾ ಮೋದಿ ಅಲೆಯಿಂದ ಗೆದ್ದಿದ್ದೇವೆ ಎಂದರೆ ಒಪ್ಪಿಕೊಳ್ಳೋಣ ಆದರೆ ಸದಾನಂದಗೌಡ, ಪ್ರಹ್ಲಾದ್‌ಜೋಶಿ ರಮೇಶ್‌ ಜಿಗಜಿಣಗಿ, ಅನಂತ್‌ಕುಮಾರ್‌, ನಳಿನ್‌ ಕುಮಾರ್‌ ಕಟೀಲ್ ಇವರೆಲ್ಲಾ ಮೋದಿ ರಾಷ್ಟ್ರ ರಾಜಕಾರಣಕ್ಕೆ ಮುನ್ನವೇ ಅಂದ್ರೆ 2014ಕ್ಕಿಂತ ಮುಂಚೆಯೇ ಸಂಸದರಾಗಿದ್ದಾರೆ. ಅಂತಹವರಿಗೆ ಮೋದಿ ಅಲೆಯಿಂದ ಗೆದ್ದರು ಅಂದ್ರೆ ಸರಿ ಆಗುತ್ತಾ? ಟೀಕೆ ಮಾಡುವ ವ್ಯಕ್ತಿ ಇದನ್ನು ನೆನಪಿಟ್ಟುಕೊಳ್ಳಲಿ ಎಂದು ತಿರುಗೇಟು ನೀಡಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top