fbpx
ಸಮಾಚಾರ

ಕೇಂದ್ರದ ವಿರುದ್ಧ ನಟ ನೀನಾಸಂ ಸತೀಶ್ ವಾಗ್ದಾಳಿ!

ಕರ್ನಾಟಕದಲ್ಲಿ ಮಹಾ ಪ್ರವಾಹ ಬಂದು ಬರೋಬ್ಬರಿ 2 ತಿಂಗಳೇ ಕಳೆದಿದೆ. ಹೀಗಿದ್ದರೂ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ಸದ್ಯ ಕೇಂದ್ರದ ಈ ನಿರ್ಲಕ್ಷ್ಯದಿಂದ ಬೇಸತ್ತ ಕನ್ನಡಿಗರು ಕೇಂದ್ರ ಸರ್ಕಾದರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಆದರೆ ಇದೀಗ ನೆರೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ನಟ ಸತೀಶ್ ನೀನಾಸಂ ಕಿಡಿಕಾರಿದ್ದಾರೆ.

 

 

ನೀನಾಸಂ ಸತೀಶ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ನಾನು ನಿಮ್ಮ ಯಾವ ಪಕ್ಷದವನೂ ಅಲ್ಲ, ನನ್ನದು ಮನುಷ್ಯ ಪಕ್ಷ, ಬಡವರ ಪಕ್ಷ, ಹಸಿದವರ ಪಕ್ಷ. ಯಾವ ಸರ್ಕಾರವಾದರೂ ಕೇಳುವ ಹಕ್ಕು ನನಗಿದೆ. ನೆರೆ ಸಂತ್ರಸ್ತರ ವಿಚಾರದಲ್ಲಿ ನಿಮ್ಮ ಪಕ್ಷಗಳನ್ನು ಬದಿಗಿಟ್ಟು, ಅವರ ಕಷ್ಟಗಳಿಗೆ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡುವ ಬುದ್ಧಿ ಬರಲಿ. ದಯಮಾಡಿ ನನ್ನನ್ನು ನಿಮ್ಮ ಯಾವ ಪಕ್ಷಕ್ಕೂ ಸೇರಿಸಬೇಡಿ ಪ್ಲೀಸ್” ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಪ್ರವಾಹ ಸಮಯದಲ್ಲಿ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ್ದ ಸತೀಶ್ ಅವರು ಸಂತ್ರಸ್ತರಿಗೆ ಬೇಕಿದ್ದ ಅವಶ್ಯಕ ವಸ್ತುಗಳಾದ ಬೆಡ್ ಶೀಟ್, ಸೋಪ್, ಟೂತ್ಪೇಸ್ಟ್, ಟವೆಲ್, ಚಪ್ಪಲಿಗಳು ಹಾಗೂ ಬಟ್ಟೆಗಳನ್ನು ನೀಡಿದರು. ಅಷ್ಟೇ ಅಲ್ಲದೆ ನೆರೆ ಸಂತ್ರಸ್ತರ ಸಹಾಯ ಮಾಡುವಂತೆ ಸಾಲು ಸಾಲು ಟ್ವೀಟ್ ಮಾಡಿ ಜನತೆಗೆ ಕರೆ ಕೊಟ್ಟಿದ್ದರು. ನನ್ನ ಕೈಲಾದಷ್ಟು ನಾನು ಮಾಡಿದ್ದೇನೆ, ಈ ಸಮಯದಲ್ಲಿ ನೆರವಾಗಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ನೀವೂ ಕೈ ಜೋಡಿಸಿ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top