fbpx
ಸಮಾಚಾರ

ಮೊದಲ ಬಾರಿಗೆ ತಮ್ಮ ಮಗಳ ವಿಡಿಯೋ ಹಂಚಿಕೊಂಡ ಶ್ರುತಿ ಹರಿಹರನ್!

ನಾತಿಚರಾಮಿ ಚಿತ್ರದ ಬಳಿಕ ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದ ಶ್ರುತಿ ಹರಿಹರನ್ ಸದ್ಯ ತಾಯಿ ಆಗಿದ್ದು ತಮ್ಮ ಮುದ್ದು ಮಗಳ ಲಾಲನೆ ಪಾಲನೆಯಲ್ಲಿ ಮಗ್ನರಾಗಿದ್ದಾರೆ. ಇದೀಗ ಶ್ರುತಿ ಹರಿಹರನ್ ತಮ್ಮ ಪುತ್ರಿಯ ವಿಡಿಯೋವನ್ನು ಮೊದಲ ಬಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

 

ಶ್ರುತಿ ಹರಿಹರನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿ ‘ನನ್ನ ಪುಟ್ಟ ಕಾಲುಗಳಿವು…
ನಾನು ಒಂದು ದಿನ ಇದೇ ಕಾಲುಗಳಲ್ಲಿ ಜಿಗಿಯುತ್ತೇನೆ, ಜೋರಾಗಿ ಓಡುತ್ತೇನೆ, ಮುಂದೊಂದು ದಿನ ಇದೇ ಕಾಲುಗಳಲ್ಲಿ ನಾನು ರಸ್ತೆಯನ್ನು ದಾಟುತ್ತೇನೆ, ಯಾರಿಗೆ ಗೊತ್ತು ನಾನು ಬಾಹ್ಯಾಕಾಶಕ್ಕೂ ಪಾದ ಬೆಳೆಸಬಹುದು. ಈ ಕಾಲುಗಳಲ್ಲಿ ಪರ್ವತಗಳನ್ನು ಹತ್ತುತ್ತೇನೆ, ಸಮುದ್ರದಲ್ಲಿ ಇದೇ ಕಾಲುಗಳನ್ನು ಬಡಿಯುತ್ತ ಈಜುತ್ತೇನೆ. ನನ್ನ ಈ ಕಾಲುಗಳೂ ನಿಮ್ಮೆಲ್ಲರಂತೆ ಎಲ್ಲ ಕೆಲಸಗಳನ್ನೂ ಮಾಡಲಿವೆ. ಆದರೆ, ಇಂದು ನನ್ನೀ ಕಾಲುಗಳು ಬಹಳ ಸಂತೋಷವಾಗಿವೆ. ಈ ಕಾಲುಗಳಿಗೆ ತನ್ನ ಬೆರಳುಗಳನ್ನು ಅಲುಗಿಸುತ್ತಾ ಇರುವುದೆಂದರೆ ಬಹಳ ಖುಷಿ… ಪ್ರೀತಿಯ ಜೆ… ನಿನ್ನೊಂದಿಗೆ ಈ 2 ತಿಂಗಳು ಅದೆಷ್ಟು ಹುಚ್ಚಾಟಗಳನ್ನು ಆಡಿದ್ದೇನೋ ನನಗೇ ಗೊತ್ತಿಲ್ಲ. ನೀನು ಬಂದಮೇಲೆ ನಮ್ಮ ಜಗತ್ತೇ ಬದಲಾಗಿದೆ. ನೀನು ನಮ್ಮ ಬದುಕಲ್ಲಿ ಬರುವವರೆಗೂ ಈ ರೀತಿಯ ಪ್ರೀತಿಯನ್ನು ನಾನು ಕಂಡಿರಲಿಲ್ಲ’ ಎಂದು ಶ್ರುತಿ ಹರಿಹರನ್ ತಮ್ಮ ಮಗಳ ಬಗ್ಗೆ ಬರೆದುಕೊಂಡಿದ್ದಾರೆ.

ಶ್ರುತಿ ಹರಿಹರನ್ ಅವರು ಕೇರಳದ ಖಾಸಗಿ ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಈವರೆಗೂ ಮಗಳ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಪುತ್ರಿಯ ಕಾಲುಗಳ ವಿಡಿಯೋ ಮಾಡಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top