fbpx
ಸಮಾಚಾರ

“ಮಗಳಿಗೆ ಕನ್ನಡ ಕಲಿಸಿ, ಕೊಂಕಣಿ ಅಲ್ಲ,, ಕೊಂಕಣಿ ಕಲಿಸುತ್ತಿರುವುದೇಕೆ” ಎಂದವರಿಗೆ ರಾಧಿಕಾ ತಿರುಗೇಟು!

ರಾಧಿಕಾ ಪಂಡಿತ್ ಮತ್ತು ಯಶ್ ಅವರ ಮುದ್ದಾದ ಮಗಳು ಆಯ್ರಾ. ಇವಳ ಬಗ್ಗೆ ಈ ದಂಪತಿ ಆಗಾಗ ಅಪ್‌ಡೇಟ್ಸ್ ನೀಡುತ್ತಿರುತ್ತಾರೆ. ಇತ್ತೀಚೆಗಷ್ಟೇ ರಾಧಿಕಾ ಒಂದು ವಿಡಿಯೋ ಅಪ್‌ಲೋಡ್ ಮಾಡಿದ್ದರು. ಈ ವಿಡಿಯೋಕ್ಕೆ ಪರ-ವಿರೋಧ ಕಾಮೆಂಟ್ ಬಂದಿವೆ. ಇದಕ್ಕೆ ರಾಧಿಕಾ ಉತ್ತರ ನೀಡಿದ್ದಾರೆ.

 

 

ನಿನ್ನೆ ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೊಂದನ್ನು ಅಪ್ಲೋಡ್ ಮಾಡಿದ್ದರು ಅದರಲ್ಲಿ ರಾಧಿಕಾ ಅವರು ಐರಾ ಜೊತೆ ಕೊಂಕಣಿ ಭಾಷೆಯಲ್ಲಿ ಮಾತನಾಡಿಸ್ತಾ, ಫೋಟೋವೊಂದ್ರಲ್ಲಿ ಅಪ್ಪ ಯಶ್‌ನನ್ನ ತೋರಿಸೋಕೆ ಹೇಳುತ್ತಾರೆ. ಆಗ ಐರಾ ಮುದ್ದುಮುದ್ದಾಗಿ ಅಪ್ಪನನ್ನ ಸರಿಯಾಗಿ ಗುರುತಿಸುತ್ತಾಳೆ. ಈ ವಿಡಿಯೋಗೆ ಕೆಲವರು ಖುಷಿಪಟ್ರೆ ಇನ್ನೂ ಕೆಲವರು ಕನ್ನಡದ ಬದಲು, ಕೊಂಕಣಿ ಮಾತನಾಡ್ತಿದ್ದೀರಿ. ಸಿನಿಮಾದಲ್ಲಿ ಮಾತ್ರ ಕನ್ನಡ ಅಂತ ಹೇಳುವುದಲ್ಲ. ಮನೆಯಲ್ಲೂ ಅದನ್ನು ಪಾಲಿಸಬೇಕು. ಕನ್ನಡ ಕಲಿಸಿ ಮಕ್ಕಳಿಗೆ ಅಮ್ಮ ಅಪ್ಪ ಅಂತ ಹೇಳಿಕೊಡಿ, ಮಗಳಿಗೆ ಕನ್ನಡ ಕಲಿಸಿ ಅಂತೆಲ್ಲಾ ಕಾಮೆಂಟ್ ಮಾಡಿದ್ದರು.

 

 

 

ಇದಕ್ಕೆ ಒಂದು ಚೂರು ಖಾರವಾಗಿಯೇ ಉತ್ತರಿಸಿರುವ ರಾಧಿಕಾ ಪಂಡಿತ್ “ಯಾರಿಗೂ ಅನುಮಾನ ಬೇಡ ಐರಾ ಅಪ್ಪನ ಮಾತೃಭಾಷೆ ಕನ್ನಡ ಮತ್ತು ಅಮ್ಮನ ಮಾತೃಭಾಷೆ ಕೊಂಕಣೀ ಎರಡರಲ್ಲಿಯೂ ರೆಸ್ಪಾಂಡ್ ಮಾಡುತ್ತಾಳೆ. ಎರಡನ್ನೂ ಕಲಿಯುತ್ತಿದ್ದಾಳೆ” ಎಂದು ಕಮೆಂಟ್ ಮಾಡಿದ್ದಾರೆ. ಐರಾಗೆ ಈಗ ಹತ್ತು ತಿಂಗಳು. ಆದರೆ ಇದು ಆಕೆಗೆ ಎಂಟು ತಿಂಗಳು ಇದ್ದಾಗ ತೆಗೆದ ವಿಡಿಯೋ ಎಂಬುದನ್ನು ರಾಧಿಕಾ ಪಂಡಿತ್ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top