fbpx
ಸಮಾಚಾರ

ಸೂಲಿಬೆಲೆಯನ್ನ ಬೈದ್ರೆ ಪಕ್ಷಕ್ಕೆ ಹಿನ್ನಡೆ: ಸದಾನಂದಗೌಡ್ರನ್ನ ಹಿಗ್ಗಾಮುಗ್ಗಾ ಜಾಡಿಸಿದ ಯತ್ನಾಳ್

ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತೆ ನೆರೆ ಪರಿಹಾರ ವಿಚಾರದಲ್ಲಿ ಮತ್ತೆ ಸ್ವಪಕ್ಷದ ರಾಜ್ಯ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮೂವರು ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ, ಸುರೇಶ್‌ ಅಂಗಡಿ ಮತ್ತು ಡಿವಿ ಸದಾನಂದ ಗೌಡರ ವಿರುದ್ಧ ಹರಿಹಾಯ್ದಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಕ್ರವರ್ತಿ ಕೇಳುವುದರಲ್ಲಿ ತಪ್ಪೇನಿಲ್ಲ. ಮೋದಿ ಪ್ರಧಾನಿಯಾಗಲಿ ಎಂದು ಸೂಲಿಬೆಲೆ ತಪಸ್ಸು ಮಾಡಿದ ವ್ಯಕ್ತಿ. ನಿಮ್ಮ ವೈಫಲ್ಯಗಳನ್ನ ಅವರ ಮೇಲೆ ಯಾಕೆ ಹಾಕ್ತೀರಿ. ಅವರ ವಿರುದ್ಧ ಟೀಕೆ ಮಾಡುವ ನೈತಿಕತೆ ನಿಮಗೆ ಇಲ್ಲ.. ಚಕ್ರವರ್ತಿಯವರಿಗೆ ಬೈದು ನಿಮ್ಮ ಗೌರವ ಅಷ್ಟೆ ಅಲ್ಲ ಪ್ರಧಾನಿಯ ಗೌರವವನ್ನು ಕಳೆಯಬೇಡಿ. ಚಕ್ರವರ್ತಿಯವರನ್ನು ಬೈದರೆ ಪಕ್ಷಕ್ಕೆ ಹಿನ್ನಡೆಯಾಗುತ್ತೆ ” ಎಂದು ಸ್ವಪಕ್ಷೀಯ ಸಂಸದರು, ಮಂತ್ರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಒಬ್ಬರು ಬೆಂಗಳೂರಿನಲ್ಲಿ ಇನ್ನೊಬ್ಬರು ಹುಬ್ಬಳಿಯಲ್ಲಿ ಕುಳಿತಿದ್ದೀರಿ. ದೆಹಲಿಗೆ ಹೋಗಿ ಪ್ರಧಾನಿ ಭೇಟಿಗೆ ಸಮಯ ನಿಗದಿ ಮಾಡಿ. ನಿಮ್ಮ ಸಾಮರ್ಥ್ಯ ತೋರಿಸಿ. ಇಲ್ಲಿ ಕುಳಿತು ಯಾರ್ಯಾರಿಗೋ ದೇಶದ್ರೋಹಿ ಎಂದು ಟೀಕೆ ಮಾಡ್ತೀರಿ. ಏನು ಹುಡುಗಾಟಿಕೆ ಮಾಡುತ್ತಿದ್ದೀರಾ! ಸಚಿವರಾದ ನೀವು ಸುಮ್ಮನೆ ಕಥೆ ಹೇಳಿಕೊಂಡಿದ್ದೀರಿ. ನಿಮಗೆ ಹೇಳೋರು ಕೇಳೋರು ಯಾರೂ ಇಲ್ವಾ? ಹೋಗಿ ಹಠ ಹಿಡಿದು 10,000 ಕೋಟಿ ಹಣ ತನ್ನಿ. ನಿಮ್ಮ ತಾಕತ್ತು ಪ್ರದರ್ಶಿಸಿ ಎಂಬುದಾಗಿ ಅವರು ಸವಾಲು ಹಾಕಿದ್ದಾರೆ.

ರಾಜ್ಯದಲ್ಲಿ ಹುಡುಗಾಟಿಕೆ ಹಚ್ಚಿದ್ದೀರಾ? ಸಂಸದರಾಗಿ ಕಥೆ ಹೇಳುದ್ದೀರಿ. ಹೇಳುವವರು ಕೇಳುವವರು ಇಲ್ವಾ ನಿಮಗೆ? ನಾನು ಪಕ್ಷ ಕಟ್ಟಿದ್ದೇನೆ, 10 ವರ್ಷ ಸಂಸದನಾಗಿ, ಕೇಂದ್ರ ಸಚಿವನಾಗಿ ಜವಾಬ್ದಾರಿ ನಿಭಾಯಿಸಿದ್ದೇನೆ. ನೀವು ಮಾತ್ರ ಜಿಲ್ಲೆಗೆ ಸೀಮಿತವಾಗಿ ಉಳಿದಿದ್ದಿರಾ, ಜಿಲ್ಲೆ ಬಿಟ್ಟು ಹೊರಗೆ ಬನ್ನಿ. ಹೋಗಿ ಹಠ ಹಿಡಿದು ನೆರೆ ಪರಿಹಾರ ಹಣ ತೆಗೆಕೊಂಡು ಬನ್ನಿ ಎಂದು ರಾಜ್ಯದ ಸಂಸದರನ್ನು ತರಾಟೆಗೆ ತೆಗೆದುಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top