fbpx
ಸಮಾಚಾರ

ನೆರೆ ಪರಿಹಾರ ಕೇಳಿದ್ದಕ್ಕೆ ಯತ್ನಾಳ್‍ಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್

ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆ ಮಾಡಿಸಿಕೊಂಡು ಬರುವಲ್ಲಿ ರಾಜ್ಯದ 25 ಸಂಸದರು ಬೇಜವಾಬ್ದಾರಿ ಮೆರೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕಿದೆ ಎಂದು ನೆರೆ ಪರಿಹಾರ ವಿಚಾರವಾಗಿ ಸ್ವಪಕ್ಷೀಯರ ವಿರುದ್ಧವೇ ಅಸಮಾಧಾನ ಹೊರಹಾಕಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

ನಿಮ್ಮ ವಿರುದ್ಧ ಪಕ್ಷ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂಬ ಬಗ್ಗೆ ವಿವರಣೆಯನ್ನು 10 ದಿನಗಳೊಳಗೆ ನಮಗೆ ಸಲ್ಲಿಸಬೇಕೆಂದು ನೋಟಿಸ್ ನಲ್ಲಿ ಬಿಜೆಪಿ ತಿಳಿಸಿದೆ ಎಂದು ವರದಿಗಳು ತಿಳಿಸಿವೆ.ಒಂದು ವೇಳೆ 10 ದಿನದೊಳಗೆ ವಿವರಣೆ ನೀಡದಿದ್ದರೆ, ನಿಮ್ಮ ವರ್ತನೆ ಬಗ್ಗೆ ನಿಮಗೆ ಯಾವುದೇ ವಿವರಣೆಗಳಿಲ್ಲ ಎಂದು ಭಾವಿಸಿ ಕೇಂದ್ರೀಯ ಶಿಸ್ತು ಸಮಿತಿ ಮುಂದಿನ ಕ್ರಮ ಕೈಗೊಳ್ಳುತ್ತದೆ ಎಂದು ನೋಟಿಸ್ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

ಯತ್ನಾಳ್ ಹೇಳಿದ್ದೇನು?
ಪರಿಹಾರ ಕೊಡಿಸುವಲ್ಲಿ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಅಂತ ನಮೋ ಬ್ರಿಗೇಡ್‍ನ ಚಕ್ರವರ್ತಿ ಸೂಲಿಬೆಲೆ ಟೀಕಿಸಿದ್ದರು. ಸೂಲಿಬೆಲೆ ಅವರ ಈ ಹೇಳಿಕೆ ಬೆಂಬಲ ನೀಡಿದ್ದ, ಬಿಜೆಪಿ ಶಾಸಕ ಯತ್ನಾಳ್ ಅವರು, ಸೂಲಿಬೆಲೆಗೆ ಬೈಯ್ದು, ಪ್ರಧಾನಿ ಮೋದಿಗೆ ಅವಮಾನ ಮಾಡಬೇಡಿ. ರಾಜ್ಯದ ಸಂಸದರು ಕೆಲಸಕ್ಕೆ ಬಾರದವರಾಗಿದ್ದಾರೆ. ಹುಬ್ಬಳ್ಳಿ- ಬೆಂಗಳೂರಿನಲ್ಲಿ ಇರುವ ಬದಲು ಮೊದಲು ದೆಹಲಿಗೆ ಹೋಗಿ ಕೆಲಸ ಮಾಡಿ. ಅನಂತಕುಮಾರ್ ಬದುಕಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top