fbpx
ಸಮಾಚಾರ

ಮೇಯರ್ ಕಚೇರಿಯಲ್ಲಿ ಆರ್‌ಎಸ್‌ಎಸ್‌ ಸಂಸ್ಥಾಪಕರಿಗೆ ಪೂಜೆ- ಹೊಸ ವಿವಾದ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ಗೌತಮ್ ಕುಮಾರ್ ಆಯ್ಕೆಗೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೌತಮ್ ಅವರು ಮೇಯರ್ ಆಗಿದ್ದನ್ನು ವಿರೋಧಿಸಿ ಕನ್ನಡಿಗರು ಟ್ವಿಟ್ಟರ್ ಅಭಿಯಾನ ನಡೆಸುತ್ತಿದ್ದಾರೆ. ಈ ನಡುವೆ ಮೇಯರ್ ಗೌತಮ್ ಅವರು ಮತ್ತೊಂದು ವಿವಾದಕ್ಕೆ ತುತ್ತಾಗಿದ್ದಾರೆ.

ಮೇಯರ್‌ ಗೌಮತ್‌ ಕುಮಾರ್‌ ಹಾಗೂ ಉಪಮೇಯರ್‌ ರಾಮಮೋಹನ್‌ ರಾಜ್‌ ಅವರು ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿತಮಗೆ ನೀಡಿರುವ ಕೊಠಡಿಯಲ್ಲಿಹೋಮ ಹವನ ನಡೆಸಿ ಕಚೇರಿ ಪ್ರವೇಶ ಮಾಡಿದರು. ಮೇಯರ್‌ ಹಾಗೂ ಉಪಮೇಯರ್‌ ಕುಟುಂಬ ಈ ಪೂಜೆಯಲ್ಲಿಪಾಲ್ಗೊಂಡಿತು. ಗೋಮೂತ್ರ ಸಿಂಪಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ವೇಳೆ ಮೇಯರ್‌ ತಮ್ಮ ಕಚೇರಿಯಲ್ಲಿರುವ ‘ಖಾಸಗಿ ಕೋಣೆ’ಯಲ್ಲಿ ಆರ್‌ಎಸ್‌ಎಸ್‌ ಸಂಸ್ಥಾಪಕ ಡಾ.ಕೇಶವ ಬಲಿರಾಂ ಹೆಡ್ಗೆವಾರ್‌ ಹಾಗೂ ಸರಸಂಚಾಲಕ ಎಂ.ಎಸ್‌.ಗೋಲ್ವಾಲ್ಕರ್‌ ಅವರ ಫೋಟೋಗಳನ್ನು ಇಟ್ಟು ಪೂಜೆ ಸಲ್ಲಿಸಿರುವುದು ವಿವಾದಕ್ಕೀಡಾಗಿದೆ. ಸರ್ಕಾರಿ ಕಚೇರಿಯಲ್ಲಿ ಆರ್‌ಎಸ್‌ಎಸ್‌ ನಾಯಕರ ಫೋಟೋ ಇಟ್ಟು ಪೂಜೆ ಮಾಡಿರುವ ಮೇಯರ್‌ ಕ್ರಮ ರಾಜಕೀಯ ವಲಯದಲ್ಲಿ ವಿವಾದಕ್ಕೀಡಾಗಿದೆ. ಸಾರ್ವಜನಿಕ ವಲಯದಲ್ಲೂ ಟೀಕೆಗೆ ಗುರಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top