fbpx
ಸಮಾಚಾರ

‘ಮಾಣಿಕ್ಯ, ಹೆಬ್ಬುಲಿಯಂತೆ; ನಿಜ ಹುಲಿ ಬಂದ್ರೆ ಓಡಿ ಹೋಗ್ತಾನೆ’ ಸುದೀಪ್​ ಬಗ್ಗೆ ದೇವಮಾನವ ವಿನಯ್ ಗುರೂಜಿ ಅಪಹಾಸ್ಯ!

ಸದಾ ಒಂದಿಲ್ಲೊಂದು ವಿವಾದಗಳಲ್ಲೇ ಹೆಚ್ಚು ಸುದ್ದಿಗೆ ಕಾರಣವಾಗುವ ಸ್ವಯಂ ಘೋಷಿತ ದೇವಮಾನವ ವಿನಯ್ ಗುರೂಜಿ ಇದೀಗ ಮತ್ತೊಮ್ಮೆ ವಿವಾದಕ್ಕೆ ಕಾರಣರಾಗಿದ್ದಾರೆ. ಹೌದು, ಸ್ಯಾಂಡಲ್​ವುಡ್ ನಟ ಸುದೀಪ್ ಬಗ್ಗೆ ಅಪಹಾಸ್ಯ ಮಾಡಿದ್ದಾರೆ ಅನ್ನಲಾದ ವಿನಯ್ ಗುರೂಜಿ ಮಾತನಾಡಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸದ್ಯ ವೈರಲ್ ಆಗಿರೋ ವಿಡಿಯೋದಲ್ಲಿ ವಿನಯ್ ಗುರೂಜಿ ಕಿಚ್ಚ ಸುದೀಪ್ ಅಭಿಮಾನಿಗಳ ಬಗ್ಗೆ ಹಾಗೂ ಸ್ವತಃ ಕಿಚ್ಚ ಬಗ್ಗೆಯೂ ಮಾತನಾಡಿರುವ ತುಣುಕು ಇದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಸುದೀಪ್ ಅವರನ್ನು ಅಪಹಾಸ್ಯ ಮಾಡಿದ್ದಕ್ಕೆ ಕಿಚ್ಚ ಫ್ಯಾನ್ಸ್, ಗುರೂಜಿಯನ್ನು ಬೆಂಡೆತ್ತುತ್ತಿದ್ದಾರೆ.

ಗುರೂಜಿ ಹೇಳಿದ್ದೇನು..?
ಸುದೀಪ್ ಸಿನಿಮಾ ನೋಡಿ ರೋಮ ಎಲ್ಲ ಎದ್ದು ನಿಲ್ಲುತ್ತೆ ಅಂತ ಹುಡುಗರು ಹೇಳುತ್ತಾರೆ. ಅವನು ಮಾಣಿಕ್ಯ- ಹೆಬ್ಬುಲಿ ಅಂತೆ. ಸರಿಯಾದ ಹುಲಿ ಬಂದ್ರೆ ಓಡಿಹೋಗುತ್ತಾನೇ ಎಂದು ಗುರೂಜಿ ಅಪಹಾಸ್ಯ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top