fbpx
ಸಮಾಚಾರ

ಡಿಸಿಎಂ ಲಕ್ಷ್ಮಣ ಸವದಿಗಾಗಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿದ ರೈತರು!

ಪ್ರವಾಹದಲ್ಲಿ ಹಾನಿಯಾದ ಬೆಳೆಗೆ ಲಕ್ಷ ರೂ. ಪರಿಹಾರಕ್ಕೆ ಕೇಳಿದ್ದ ರೈತರಿಗೆ ತಮ್ಮದು 80 ಎಕರೆ ಬೆಳೆ ಹಾನಿಯಾಗಿದೆ 80 ಲಕ್ಷ ರೂ. ಪರಿಹಾರ ಬೇಕಾಗುತ್ತದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ರೈತರು 180 ರೂ. ದೇಣಿಗೆ ಸಂಗ್ರಹಿಸಿ ಸವದಿ ಅವರಿಗೆ ಕೋರಿಯರ್‌ ಮೂಲಕ ಕಳುಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನಿರತ ರೈತರು ತಮ್ಮೊಳಗೆ ₹180ಯನ್ನು ಸಂಗ್ರಹಿಸಿ ಡಿಸಿ ಮೂಲಕ ಡಿಸಿಎಂ ಸವದಿಗೆ ನೀಡಲು ನಿರ್ಧರಿಸಿದ್ದಾರೆ. ಜೊತೆಗೆ ರಾಜ್ಯಾದ್ಯಂತ ರೈತರಿಂದ ಭಿಕ್ಷೆ ಸಂಗ್ರಹಿಸಿ ಸವದಿಗೆ ಪರಿಹಾರ ನೀಡಲು ನಿರ್ಧರಿಸಿದ್ದಾರೆ. ಈ ಮೂಲಕ ಡಿಸಿಎಂ ಹಾಗೂ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಚೆನ್ನಮ್ಮ ವೃತ್ತದದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ಇದೇ ಸಂದರ್ಭ ಭಿಕ್ಷೆ ಎತ್ತಿ ಹಣ ಸಂಗ್ರಹಿಸಿ ಡಿಸಿಎಂಗೆ ರವಾನಿಸುವ ಮೂಲಕ ಬಿಸಿ ಮುಟ್ಟಿಸಿದರು.

ಏನಿದು ಘಟನೆ:
ಪ್ರವಾಹದ ಪರಿಹಾರ ವಿತರಣೆ ಪರಿಶೀಲನೆ ಬಂದಿದ್ದ ಸಮಯದಲ್ಲಿ ರೈತರು ಪರಿಹಾರವನ್ನು ಐವತ್ತು ಸಾವಿರದಿಂದ 1 ಲಕ್ಷ ರೂಪಾಯಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನುಒತ್ತಾಯ ಮಾಡಿದ್ದರು. ರಾಜ್ಯದ ಖಜಾನೆಯಲ್ಲಿ ಹಣವಿಲ್ಲ ನಾವೇನು ಮಾಡಲು ಆಗುವುದಿಲ್ಲ. ಕೇಂದ್ರ ಸರ್ಕಾರ ಪರಿಹಾರದ ಹಣವನ್ನು ನೀಡುವವರೆಗೂ ಕಾಯಬೇಕು ಎಂದು ಸಿಎಂ ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಿಎಸ್ವೈ ಅವರ ಉತ್ತರಕ್ಕೆ ತೃಪ್ತರಾಗದ ರೈತರು ವಿರೋಧ ಮಾಡಿದಾಗ ಅಡ್ಡ ಬಂದ ಡಿಸಿಎಂ ಲಕ್ಷ್ಮಣ ಸವದಿ ನನ್ನದು ನೂರು ಏಕರೆ ಜಮೀನಿದೆ. ಎಲ್ಲದಕ್ಕೂ ಪರಿಹಾರ ನೀಡಿದ್ದರೆ ಒಂದು ಕೋಟಿ ರೂಪಾಯಿ ಆಗುತ್ತದೆ. ಕೇಂದ್ರವು ಕೊಡುವ ಬೆಳೆ ಪರಿಹಾರದೊಂದಿಗೆ ನಾವೂ ಒಂದಷ್ಟು ಸೇರಿಸಿ ಕೊಡಬೇಕು ಎಂಬ ಚಿಂತನೆ ನಡೆಸಿದ್ದೇವೆ ರೈತ ಮುಖಂಡರಿಗೆ ಸಮಾಧಾನ ಆಗದೇ ಇದ್ದರೆ ನಾನೇನೂ ಮಾಡಲು ಆಗುವುದಿಲ್ಲ ಎಂದು ಸವದಿ ಹೇಳಿ ಕೈಚೆಲ್ಲಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top