fbpx
ಸಮಾಚಾರ

“ಪರಿಹಾರ ಪಡೆಯಲು ಸಂತ್ರಸ್ತರೇ ಬರುತ್ತಿಲ್ಲ” ಸಂತ್ರಸ್ತರ ಮೇಲೆ ಗೂಬೆ ಕೂರಿಸಿದ ಸಚಿವ ಮಾಧುಸ್ವಾಮಿ.

ನೆರೆ ಸಂತ್ರಸ್ತರ ಪರಿಹಾರ ಕುರಿತು ರಾಜ್ಯ ಸರ್ಕಾರ ತ್ವರಿತಗತಿ ಪರಿಹಾರಕ್ಕೆ ಮುಂದಾಗಿದೆ. ಆದರೆ, ಸಂತ್ರಸ್ತರೇ ಪರಿಹಾರ ಪಡೆಯಲು ಮುಂದೆ ಬರುತ್ತಿಲ್ಲ. ಜನರೇ ಮುಂದೆ ಬರದಿದ್ದರೆ ನಾವೇನು ಮಾಡಲು ಸಾಧ್ಯ ಎಂದು ಸಚಿವ ಮಾಧುಸ್ವಾಮಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮನೆ ಕಟ್ಟಿಕೊಳ್ಳಲು ಒಂದು ಲಕ್ಷ ರೂ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ತಾತ್ಕಾಲಿಕವಾಗಿ ಮನೆ ಕಟ್ಟಿಕೊಳ್ಳಲು 50 ಸಾವಿರ ಕೊಟ್ಟಿದ್ದೇವೆ. ಆದರೆ ಸೂಕ್ತ ದಾಖಲೆಗಳನ್ನು ಸಂತ್ರಸ್ಥರು ಸಲ್ಲಿಸದಿರುವ ಕಾರಣಪರಿಹಾರ ಹಂಚಿಕೆ ವಿಳಂಬವಾಗಿದೆ.ಸಂತ್ರಸ್ಥರೇ ಪರಿಹಾರ ಪಡೆಯಲು ಮುಂದೆ ಬರುತ್ತಿಲ್ಲ. ಯಾರಿಗೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸುವವರು ಜಿಲ್ಲಾಧಿಕಾರಿ, ತಹಶೀಲ್ದಾರ್,ವಿಭಾಗಾಧಿಕಾರಿ ಅವರನ್ನು ಭೇಟಿ ಮಾಡಿ ದಾಖಲೆಗಳನ್ನು ಸಲ್ಲಿಸಿ ಎಂದು ಕಾನೂನು ಸಚಿವ ಮಾಧುಸ್ವಾಮಿ ಅವರು ಹೇಳಿದ್ದಾರೆ.”

‘ನಿರಾಶ್ರಿತರಿಗೆ ಅಂದಾಜು 90,000 ಮನೆಗಳ ಅಗತ್ಯ ಇದೆ. ಅವುಗಳನ್ನು ಕಟ್ಟಿಕೊಡಲು ರಾಜ್ಯ ಸರ್ಕಾರವೂ ಸಿದ್ಧವಿದೆ. ಆದರೆ, ಈವರೆಗೂ ಮನೆಗಾಗಿ ಕೇವಲ 9,000 ಅರ್ಜಿಗಳು ಬಂದಿವೆ. ಮನೆ ಕಟ್ಟಿಕೊಳ್ಳಲು ಒಂದು ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಆದರೆ ಇದನ್ನು ಸ್ವೀಕರಿಸಲು ಯಾರೂ ಮುಂದೆ ಬರುತ್ತಿಲ್ಲ ಎಂಬುದಾಗಿ ಮಾಧುಸ್ವಾಮಿ ದೂರಿದರು.

ಸಂತ್ರಸ್ತರು ಪರಿಹಾರ ಪಡೆದು ಮನೆ ಕಟ್ಟಿಕೊಳ್ಳಲು ಮುಂದಾಗುತ್ತಿಲ್ಲ. ಸರ್ಕಾರ ಎಲ್ಲೂ ಫೇಲ್ ಆಗಿಲ್ಲ. ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ರಾಜ್ಯಕ್ಕೆ ಬರಲಿದೆ ಎಂದು ಸಮರ್ಥಿಸಿಕೊಂಡರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top