fbpx
ಸಮಾಚಾರ

ಪ್ರವಾಹ ಪರಿಹಾರ ವಿಳಂಬ: ಅನಂತ್ ಕುಮಾರ್ ಪುತ್ರಿಯರ ಹೇಳಿಕೆಗೆ ಬೆಚ್ಚಿಬಿದ್ದ ಬಿಜೆಪಿ ನಾಯಕರು..

ನೆರೆ ಪರಿಹಾರ ವಿಚಾರದಲ್ಲಿ ಸರ್ಕಾರ ತೋರುತ್ತಿರುವ ನಿರ್ಲಕ್ಷ್ಯದ ಕುರಿತು ವಿಪಕ್ಷ ಸೇರಿದಂತೆ ಬಿಜೆಪಿ ನಾಯಕರಿಂದಲೂ ಟೀಕೆಗಳು ವ್ಯಕ್ತವಾಗುತ್ತಿದೆ. ಕೇಂದ್ರದ ವಿರುದ್ಧ ದಿನೇದಿನೇ ಧ್ವನಿ ಜೋರಾಗಿದ್ದು, ಈಗ ದಿವಂಗತ ಬಿಜೆಪಿ ನಾಯಕ ಅನಂತ ಕುಮಾರ್​ ಅವರ ಇಬ್ಬರು ಮಕ್ಕಳು ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ವಿಜೇತ ಅನಂತ್ ಕುಮಾರ್ ಅವರು, ಪ್ರವಾಹದಿಂದಾಗಿ ರಾಜ್ಯದ ಅರ್ಧಕ್ಕಿಂತಲೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗಾಗಿ ಮಿಡಿಯಬೇಕಾಗಿರುವ ಸಮಾಜ ಇಂದು ಕಠೋರವಾಗಿ ಅಸೂಕ್ಷ್ಮತೆಯಿಂದ ವರ್ತಿಸುತ್ತಿದೆ. ಅವರ ಧ್ವನಿ ಕೇಳಬೇಕಾದವರು ಕಿವುಡಾಗಿದ್ದಾರೆ. ಕನ್ನಡಿಗರು ತೋರುತ್ತಿರುವ ಸಹಕಾರ ಮತ್ತು ಕರುಣೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.

 

 

ಇದರಂತೆ ಐಶ್ವರ್ಯ ಅನಂತ್ ಕುಮಾರ್ ಅವರೂ ಕೂಡ ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಪ್ರವಾಹದಿಂದಾಗಿ 22 ಜಿಲ್ಲೆಗಳು, 103 ತಾಲೂಕಿನ ಜನರು ನಲುಗುತ್ತಿದ್ದಾರೆ. ಕಳೆದೆರಡು ತಿಂಗಳುಗಳಿಂದ ಪರಿಹಾರ ನಿರೀಕ್ಷೆಯಲ್ಲಿರುವ ಜನರಿಗೆ ಯಾವುದೇ ಆಸರೆ ಸಿಕ್ಕಿಲ್ಲ. ಈ ವಿಚಾರ ಕುರಿತು ರಾಜ್ಯ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ. ಜೊತೆಗೆ ಕೇಂದ್ರ ಕೂಡ ರಾಜ್ಯದ ವಿಚಾರದಲ್ಲಿ ತಾರತಮ್ಯ ಮಾಡುತ್ತಾ ರಾಜಕೀಯ ನಡೆಸುತ್ತಿದೆ. ಪ್ರವಾಹ ವಿಚಾರದಲ್ಲಿ ನಮಗೆ ರಾಜಕೀಯ ಬದಲು ಪರಿಹಾರ ನೀಡಿ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top