fbpx
ಸಮಾಚಾರ

‘ಚಂದನ್ ಶೆಟ್ಟಿಯಿಂದಾಗಿ ನನಗೆ ಬಿಪಿ, ಶುಗರ್ ಹೆಚ್ಚಾಗಿದೆ’

ಗಾಯಕ ಚಂದನ್ ಶೆಟ್ಟಿ ಅವರು ಶುಕ್ರವಾರ ರಾತ್ರಿ ಯುವ ದಸರಾ ಕಾರ್ಯಕ್ರಮದಲ್ಲಿ ಗೆಳತಿ ನಿವೇದಿತಾ ಗೌಡಗೆ ಪ್ರೇಮ ನಿವೇದನೆ ಮಾಡಿರುವ ವಿಚಾರ ಈಗ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ. ಈ ಮದ್ಯೆ ಚಂದನ್ ಶೆಟ್ಟಿ ಪ್ರಕರಣದಿಂದ ಬಿಪಿ ಶುಗರ್ ಹೆಚ್ಚಾಗಿದೆ ಎಂದು ಸಚಿವ ವಿ ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸೋಮಣ್ಣ, ಆ ಪ್ರಕರಣ ನಡೆದ ದಿನದಿಂದ ನನಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗಿಲ್ಲ. ಇದನ್ನು ನಿವಾರಿಸು ಅಂತ ಚಾಮುಂಡೇಶ್ವರಿ ಮುಂದೆ ನಿಂತು ಕೇಳಿದೆ. 2 ನಿಮಿಷ ದೇವರ ಮುಂದೆ ನಿಂತೆ. ಆನಂತರ ಅಲ್ಲಿಂದ ಜನರು ಬೈದು ಕಳುಹಿಸಿದ್ರು ಎಂದಿದ್ದಾರೆ.

ಚಂದನ್‌ ಶೆಟ್ಟಿನನ್ನ ಕ್ಷೇತ್ರದ ವೋಟರ್‌. ಫೋನ್‌ ಮಾಡಿ ಕ್ಷಮೆ ಕೇಳಿದ್ದಾನೆ. ನೀನ್ಯಾಕಯ್ಯ ಶನಿ ಹೆಗಲೇರಿದ ರೀತಿ ಬಂದೇ ಅಂತ ಹೇಳಿದೆ. ಅವರ ಅಮ್ಮ ನನ್ನ ಹೆಂಡತಿಗೆ ಫೋನ್‌ ಮಾಡಿ ಅರ್ಧ ಗಂಟೆ ಪಿಟೀಲ್‌ ಕುಯ್ದಿದ್ದಾರೆ. ಪವಿತ್ರ ದಸರಾದಲ್ಲಿ ಇದೆಲ್ಲ ಮಾಡಿದ್ದು ಸರಿಯಲ್ಲ. ಈಗಾಗಲೇ ಚಂದನ್‌ ಶೆಟ್ಟಿಗೆ ನೋಟಿಸ್‌ ಕೊಟ್ಟಿದ್ದೇವೆ, ದಸರೆ ಮುಗಿನ ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ನಡೆದಿದ್ದೇನು..?
ನಿನ್ನೆ ಯುವ ದಸರಾ ಕಾರ್ಯಕ್ರಮದಲ್ಲಿ ಚಂದನ್, ನಿವೇದಿತಾ ಪೋಷಕರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು. ಕಾರ್ಯಕ್ರಮ ನೀಡಿ ಜನರನ್ನು ಮನರಂಜಿಸುತ್ತಿದ್ದ ಚಂದನ್ ವೇದಿಕೆಯಲ್ಲೇ ನಿವೇದಿತಾಳಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದರು ಅಲ್ಲದೆ ಉಂಗುರ ಕೂಡ ತೊಡಿಸಿದ್ದರು. ಈ ವೇಳೆ ನೆರೆದಿದ್ದ ಮಂದಿ ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟುವ ಮೂಲಕ ಇಬ್ಬರನ್ನೂ ಅಭಿನಂದಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top