fbpx
ಸಮಾಚಾರ

ಶಾನ್ವಿ ಅಸಮಾಧಾನಕ್ಕೆ ಸ್ಪಷ್ಟನೆ ನೀಡಿದ ನಿರ್ಮಾಪಕ

ನಟಿ ಶಾನ್ವಿ ಶ್ರೀವಾಸ್ತವ್ ಇತ್ತೀಚೆಗೆ “ಸಿನಿಮಾದಲ್ಲಿ ನಟಿಯರಿಗೆ ಹೆಚ್ಚಿನ ಮಹತ್ವ ಕೊಡುವುದಿಲ್ಲ, ಸಿನಿಮಾದ ಬಗ್ಗೆಯೂ ಯಾವುದೇ ಮಾಹಿತಿ ಕೊಡುವುದಿಲ್ಲ” ಎಂದು ತಮ್ಮ ಕೆಲ ಮಾತುಗಳನ್ನು ಸೋಶಿಯಲ್ ಮೀಡಿಯಾದ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.

‘ನಮಗೆ ಮೊದಲು ಹೇಳಿದಂತೆ ಸಿನಿಮಾ ಮಾಡುವುದಿಲ್ಲ, ಸಿನಿಮಾದಲ್ಲಿ ಬದಲಾವಣೆ ಮಾಡುವಾಗ ಒಂದು ಮಾತು ತಿಳಿಸುವುದಿಲ್ಲ. ಇದು ಸರಿಯಲ್ಲ’ ಎಂದು ಶಾನ್ವಿ ಶ್ರೀವಾಸ್ತವ್‌ ಯಾರ ಹೆಸರನ್ನೂ ಉಚ್ಚರಿಸದೆ ಗೀತಾ ಚಿತ್ರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಇದೀಗ ‘ಗೀತಾ’ ಚಿತ್ರದ ಯಶಸ್ಸು ಹಂಚಿಕೊಳ್ಳುವುದಕ್ಕೆ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಸ್ಪಷ್ಟನೆ ಸಿಕ್ಕಿದೆ.

“ಗೀತಾ ಚಿತ್ರದ ಒಂದು ಹಾಡನ್ನು ನಾವು ಅನಿವಾರ್ಯವಾಗಿ ತೆಗೆಯಬೇಕಾಯಿತು. ಅದನ್ನು ಶಾನ್ವಿ ಅವರಿಗೆ ತಿಳಿಸದೇ ಇದ್ದುದು ನಮ್ಮ ತಪ್ಪು. ನಾವು ಉದ್ದೇಶಪೂರ್ವಕವಾಗಿ ಆ ಹಾಡನ್ನು ತೆಗೆಯಲಿಲ್ಲ, ಆ ಹಾಡಿಗೆ 35 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ.. ಸಿನಿಮಾದ ಅವಧಿ ಜಾಸ್ತಿಯಾಗಿದ್ದರಿಂದ ತೆಗೆಯಬೇಕಾಯಿತು. ಅಷ್ಟೇ ಅಲ್ಲದೆ ನಾಯಕನ ಒಂದು ಹಾಡನ್ನೂ ತೆಗೆದಿದ್ದೇವೆ. ಶಾನ್ವಿ ಅವರಿಗೆ ಬೇಜಾರಾಗಿದ್ದು ನಮಗೆ ತಿಳಿಸಿದ್ದರೆ ನಾವು ಕ್ಷಮೆ ಕೇಳುತ್ತಿದ್ದೆವು. ಈಗಲೂ ನಮ್ಮ ಕಡೆಯಿಂದ ತಪ್ಪಾಗಿದ್ದನ್ನು ಒಪ್ಪಿಕೊಳ್ಳುತ್ತಿದ್ದೇವೆ. “ಎಂದು ನಿರ್ಮಾಪಕ ಸಲಾಂ ಅವರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top