fbpx
ಸಮಾಚಾರ

ವಿರೇಂದ್ರ ಸೆಹ್ವಾಗ್​ಗೆ ತಿರುಗೇಟು ನೀಡಿದ ರವೀಂದ್ರ ಜಡೇಜಾ?

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 203 ರನ್ ಗೆಲುವು ದಾಖಲಿಸಿತು. ಟೀಮ್ ಇಂಡಿಯಾ ವಿನ್ ಆದ ಹಿನ್ನಲೆಯಲ್ಲಿ ಅನೇಕ ಮಾಜಿ ಆಟಗಾರರು ಟೀಮ್ ಇಂಡಿಯಾ ಆಟಗಾರರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಇದರಲ್ಲಿ ವೀರೇಂದ್ರ ಸೆಹ್ವಾಗ್ ಕೂಡ ಒಬ್ಬರು.

 

 

ಟೆಸ್ಟ್ ಪಂದ್ಯದ ಗೆಲುವಿನ ನಂತರ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​, ಟೀಮ್ ಇಂಡಿಯಾ ಆಟಗಾರರಿಗೆ ಟ್ವಿಟ್ಟರ್ ಮೂಲಕ ಶುಭ ಕೋರಿದ್ರು. ಅದ್ರಲ್ಲೂ ಪಂದ್ಯದಲ್ಲಿ ಬೆಸ್ಟ್ ಪರ್ಫಾಮೆನ್ಸ್​ ನೀಡಿದ್ದ ರೋಹಿತ್ ಶರ್ಮಾ, ಮಯಾಂಕ್ ಅಗರ್​ವಾಲ್, ಚೆತೇಶ್ವರ್ ಪೂಜಾರ, ಮೊಹಮ್ಮದ್ ಶಮಿ ಮತ್ತು ಅಶ್ವಿನ್​ ಪ್ರದರ್ಶನದ ಬಗ್ಗೆ, ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ರು. ಆದರೆ ಈ ಟ್ವೀಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಜಡೇಜಾ ಅವರು ಹೆಸರು ಇರಲಿಲ್ಲ.

 

 

ಇದು ಅಭಿಯಾನಿಯ ಕೋಪಕ್ಕೆ ಕಾರಣವಾಗಿದ್ದು, ಸೆಹ್ವಾಗ್‌ಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು. ನಿಮ್ಮ ಟಿವಿಯಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ನಿರ್ವಹಣೆ ಕಾಣಿಸಿಲ್ಲವೇ? ಅಥವಾ ನಿದ್ದೆಗೆ ಜಾರಿದರೇ ? ಎಂದು ಪ್ರಶ್ನಿಸಿದ್ದರು. ಪ್ರಸ್ತುತ ಟ್ವೀಟ್ ಅನ್ನು ರವೀಂದ್ರ ಜಡೇಜಾ ರಿ ಟ್ವೀಟ್ ಮಾಡಿದ್ದಾರೆ. ಈ ಮೂಲಕ ತಮ್ಮ ಹೆಸರನ್ನು ಉಲ್ಲೇಖಿಸಲು ಮರೆತಿರುವ ವೀರೇಂದ್ರ ಸೆಹ್ವಾಗ್‌ಗೆ ಪರೋಕ್ಷ ತಿರುಗೇಟು ನೀಡಿದ್ದಾರೆ ಎನ್ನಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top