fbpx
ಸಮಾಚಾರ

ಕನ್ನಡ ಚಿತ್ರನಟನ ಮಗಳೊಂದಿಗೆ ಕೆ.ಎಲ್ ರಾಹುಲ್ ಡೇಟಿಂಗ್?

ಬಾಲಿವುಡ್‌ಗೂ ಕ್ರಿಕೆಟಿಗರಿಗೂ ಇರುವ ನಂಟು ತೀರಾ ಹಳೆಯದು. ಬಾಲಿವುಡ್‌ ನಟಿಯರು ಖ್ಯಾತ ಕ್ರಿಕೆಟಿಗರನ್ನು ಪ್ರೀತಿಸಿ ಮದುವೆಯಾಗುವುದು, ಕೈಕೈ ಹಿಡಿದುಕೊಂಡು ಊರು ಸುತ್ತಿ ಲವ್ವಿ ಡವ್ವಿ ನಡೆಸುವುದಕ್ಕೆ ಭಾರತದಲ್ಲಿ ದೊಡ್ಡ ಪರಂಪರೆಯೇ ಇದೆ..ಇದಕ್ಕೆ ಇತ್ತೀಚಿನ ಅತಿದೊಡ್ಡ ಉದಾಹರಣೆಯೆಂದರೆ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ನಡುವಿನ ಪ್ರೇಮಕತೆ. ಇದು ಹಾಗಿರಲಿ ಈಗ ವಿಷಯ ಏನಪ್ಪಾ ಅಂದ್ರೆ ಸದ್ಯ ಭಾರತ ಕ್ರಿಕೆಟ್ ತಂಡದ ಸ್ಟಾರ್‌ ಆಟಗಾರರಲ್ಲಿ ಒಬ್ಬನಾಗಿರುವ ಕೆ.ಎಲ್ ರಾಹುಲ್ ಹೆಸರು ಖ್ಯಾತ ನಟನ ಮಗಳೊಂದಿಗೆ ಕೇಳಿ ಬಂದಿದೆ.​

ಕನ್ನಡದ ಪೈಲ್ವಾನ್ ಸಿನಿಮಾದಲ್ಲಿ ನಟಿಸಿರುವ ಬಾಲಿವುಡ್‌ನ ಹಿರಿಯ ನಟ ಸುನಿಲ್‌ ಶೆಟ್ಟಿಪುತ್ರಿ, ನಟಿ ಆಥಿಯಾ ಶೆಟ್ಟಿಜತೆ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಸಲ್ಮಾನ್ ಖಾನ್ ನಿರ್ಮಾಣದ ‘ಹೀರೋ’ ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದ ಆತಿಯಾ ಸದ್ಯ ರಾಹುಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪುರಾವೆ ಎಂಬಂತೆ ಆಕಾಂಕ್ಷ ರಂಜನ್ ಕಪೂರ್ ಎಂಬವರು ಫೋಟೋವೊಂದನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಅಥಿಯಾ ಈ ಬಗ್ಗೆ ಉತ್ತರ ನೀಡಲು ನಿರಾಕರಿಸಿದ್ದಾರೆ. ಅಂತೆಯೇ ರಾಹುಲ್ ವಿಜಯ್ ಹಜಾರೆ ಸರಣಿಯಲ್ಲಿ ಬ್ಯುಸಿ ಇರುವುದರಿಂದ ಈ ಬಗ್ಗೆ ಅವರ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ಹಿಂದೆ ರಾಹುಲ್ ನಟಿ ನಿಧಿ ಅಗರ್ವಾಲ್ ಜೊತೆ ರಿಲೇಷನ್‍ಶಿಪ್‍ನಲ್ಲಿದ್ದರು ಎಂಬ ಗಾಸಿಫ್ ಎಲ್ಲೆಡೆ ಹರಿದಾಡಿತ್ತು. ಆಗ ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಇಬ್ಬರೂ ಹೇಳಿಕೊಂಡಿದ್ದರು. ಇನ್ನೊಂದೆಡೆ ಅಥಿಯಾ ಅಂತರಾಷ್ಟ್ರೀಯ ರ್ಯಾಪರ್ ಹಾಗೂ ಗಾಯಕ ಡ್ರೇಕ್ ಜೊತೆ ಡೇಟಿಂಗ್ ನಡೆಸುತ್ತಿದ್ದರು ಸುದ್ದಿ ಕೂಡ ಕೇಳಿಬಂದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top