fbpx
ಸಮಾಚಾರ

ಮುದ್ದು ಮಗಳನ್ನು ಅಭಿಮಾನಿಗಳಿಗೆ ಪರಿಚಯಿಸಿದ ಅಜಿಂಕ್ಯ ರಹಾನೆ.

ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ ಹಾಗೂ ಮಧ್ಯಮ ಕ್ರಮಾಂಕದ ಕಲಾತ್ಮಕ ಬ್ಯಾಟ್ಸ್‌ಮನ್, ಅಜಿಂಕ್ಯ ರಹಾನೆ ಅಪ್ಪನಾಗಿದ್ದಾರೆ. ಅಜಿಂಕ್ಯಾ ರಹಾನೆ ಅವರ ಪತ್ನಿ ರಾಧಿಕಾ ಅವರು ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದರೊಂದಿಗೆ ಭಾರತ ಟೆಸ್ಟ್‌ ಕ್ರಿಕೆಟ್ ತಂಡದ ಉಪ ನಾಯಕ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.

ಇದೀಗ ತಮ್ಮ ಮುದ್ದು ಮಗಳನ್ನು ರಹಾನೆ ಅವರು ಅಭಿಮಾನಿಗಳಿಗೆ ಪರಿಚಯಿಸಿದ್ದು ತಾವು ಮತ್ತು ತಮ್ಮ ಪತ್ನಿ ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಈ ಫೋಟೋಗೆ ಹೆಲೋ ಎಂದು ಕ್ಯಾಪ್ಷನ್ ನೀಡಿದ್ದಾರೆ.

ಅಜಿಂಕ್ಯ ರಹಾನೆ 2014ರಲ್ಲಿ ತನ್ನ ಬಾಲ್ಯದ ಗೆಳತಿ ರಾಧಿಕಾ ಅವರನ್ನು ವರಿಸಿದ್ದರು. ಶಾಲಾದಿನಗಳಲ್ಲಿದ್ದಾಗ ಮೊದಲು ಭೇಟಿಯಾಗಿದ್ದ ರಹಾನೆ-ರಾಧಿಕ ಇಬ್ಬರ ಸ್ನೇಹ ಗಾಢವಾಗಿತ್ತು. ಬೆಳೆಯುತ್ತಲೇ ಈ ಸ್ನೇಹ, ಪ್ರೀತಿಯತ್ತ ವಾಲಿತ್ತು. ಅನಂತರ ಇಬ್ಬರ ಹೆತ್ತವರ ಒಪ್ಪಿಗೆ ಮೇರೆಗೆ ಹರಾನೆ-ರಾಧಿಕ ಜಂಟಿ ಜೀವನಕ್ಕೆ ಕಾಲಿರಿಸಿದ್ದರು. ಕಳೆದ ಜುಲೈನಲ್ಲಿ ಹಲವು ಫೋಟೊಗಳ ಮೂಲಕ ರಹಾನೆ ದಂಪತಿಗಳು ಗರ್ಭಧಾರಣೆ ಬಗ್ಗೆೆ ಸುದ್ದಿ ನೀಡಿದ್ದರು.

ರಹಾನೆ ಹಾಗೂ ಅವರ ಕುಟುಂಬಕ್ಕೆ ಹೊಸ ಅತಿಥಿ ಆಗಮಿಸಿರುವ ಹಿನ್ನೆೆಲೆಯಲ್ಲಿ ಮಾಜಿ ಆಟಗಾರ ಹರ್ಭಜನ್ ಸಿಂಗ್ ರಹಾನೆಗೆ ಶುಭಕೋರಿ ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿದ್ದು, ಜೀವನದ ಬಹುಮುಖ್ಯ ಸಂತಸದ ದಿನಗಳು ಆರಂಭವಾಗಿದೆ ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top