fbpx
ಸಮಾಚಾರ

ಯುವರತ್ನ ಟೀಸರ್‌ ನೋಡಿ ಬಾಲಿವುಡ್ ನಟ ಸಂಜಯ್ ದತ್ ಹೇಳಿದ್ದೇನು ಗೊತ್ತಾ?

ಆಯುಧ ಪೂಜೆ ಹಿನ್ನೆಲೆಯಲ್ಲಿ ಈ ಮೊದಲೇ ಹೇಳಿದಂತೆ ಪವರ್‌ಸ್ಟಾರ್‌ ಪುನೀತ್ ರಾಜ್‍ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನಿರ್ದೇಶಕ ಹೇಳಿದಂತೆ ಹೊಂಬಾಳೆ ಫಿಲ್ಮ್ಸ್ ಯೂಟ್ಯೂಬ್ ಚಾನಲ್‍ನಲ್ಲಿ ‘ಯುವರತ್ನ’ ಟೀಸರನ್ನು ರಿಲೀಸ್ ಮಾಡಿದೆ. ಟೀಸರಿನಲ್ಲಿ ರಗ್ಬಿ ಆಟಗಾರನಾಗಿ ಪುನೀತ್ ರಾಜ್‍ಕುಮಾರ್ ಕಾಣಿಸಿಕೊಂಡಿದ್ದಾರೆ.

 

 

ಸಂಜಯ್ ದತ್ ಹೇಳಿದ್ದೇನು?
ಸಂಜಯ್ ತಮ್ಮ ಟ್ವಿಟ್ಟರಿನಲ್ಲಿ ಟೀಸರ್ ಲಿಂಕ್ ಹಂಚಿಕೊಂಡು ಅದಕ್ಕೆ, “ಯುವರತ್ನ ಟೀಸರ್ ನೋಡಲು ಅದ್ಭುತವಾಗಿದೆ” ಎಂದು ಬರೆದುಕೊಂಡು ಇಡೀ ಚಿತ್ರತಂಡಕ್ಕೆ ಶುಭಶಾಯ ತಿಳಿಸಿದ್ದಾರೆ.

ಟೀಸರ್​ ಆಟ-ಓಟ ಹಾಗೂ ಹೊಡೆದಾಟದ ನಡುವೆ ಚಿತ್ರೀಕರಿಸಲಾಗಿದ್ದು, ಹೊಸ ಹೇರ್​ ಸ್ಟೈಲ್​ನೊಂದಿಗೆ ಪವರ್ ಸ್ಟಾರ್ ಕಾಣಿಸಿಕೊಂಡಿದ್ದಾರೆ. ಈ ದುನಿಯಾದಲ್ಲಿ ಮೂರು ಥರ ಗಂಡಸರು ಇರುತ್ತಾರೆ. ರೂಲ್​ನ ಫಾಲೋ ಮಾಡೋರು. ರೂಲ್​ನ ಬ್ರೇಕ್ ಮಾಡೋರು. ಮೂರನೇ ಅವರು ನನ್ ಥರ ರೂಲ್​ ಮಾಡೋರು ಎಂಬ ಡೈಲಾಗ್​ ಅಪ್ಪು ಅಭಿಮಾನಿಗಳಂತು ಹೊಸ ರೋಮಾಂಚನ ನೀಡುವುದರಲ್ಲಿ ಸಂಶಯವೇ ಇಲ್ಲ.

ಕೆಜಿಎಫ್‌ ಸಿನಿಮಾಗೆ ಬಂಡವಾಳ ಹೂಡಿದ್ದ ವಿಜಯ್ ಕಿರಗಂದೂರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶಿಕ್ಷಣ, ಡ್ರಗ್ಸ್ ಮಾಫಿಯಾ ಕುರಿತ ಕಥೆ ಈ ಸಿನಿಮಾದಲ್ಲಿದೆ. ಸಂತೋಷ್ ಆನಂದರಾಮ್ ನಿರ್ದೇಶನದ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ನಿರ್ಮಿಸಲಾಗಿದೆ.

ಚಿತ್ರದಲ್ಲಿಕಾಲೇಜು ಹುಡುಗನಾಗಿ ಪುನೀತ್​ ಕಾಣಿಸಿಕೊಳ್ಳುತ್ತಿದ್ದಾರೆ. ಪವರ್ ಸ್ಟಾರ್‌ಗೆ ನಾಯಕಿಯಾಗಿ ಸಾಯೇಷಾ ಸೈಗಲ್, ಇತರ ತಾರಾಗಣದಲ್ಲಿ ಡಾಲಿ ಧನಂಜಯ್, ರಾಧಿಕಾ ಶರತ್‌ಕುಮಾರ್, ಪ್ರಕಾಶ್ ರಾಜ್, ಸಾಯಿ ಕುಮಾರ್, ಸೋನು ಗೌಡ, ಕುರಿ ಪ್ರತಾಪ್,ಅ ಚ್ಯತ್ ಕುಮಾರ್, ಗುರುದತ್, ಆರು ಗೌಡ, ತ್ರಿವೇಣಿ, ರವಿಶಂಕರ್ ಗೌಡ, ವಸಿಷ್ಠ ಸಿಂಹ, ರಂಗಾಯಣ ರಘು ಮುಂತಾದವರು ನಟಿಸುತ್ತಿದ್ದಾರೆ. ಶೇ.65 ಚಿತ್ರೀಕರಣ ಮುಗಿಸಿದ್ದು, ನಿಗದಿತ ಸಮಯಕ್ಕೆ ಸರಿಯಾಗಿ ಸಂಪೂರ್ಣ ಶೂಟಿಂಗ್ ಮುಗಿಸಬೇಕು ಎಂದು ಚಿತ್ರತಂಡ ಪ್ಲ್ಯಾನ್ ಮಾಡಿದೆ ಅಂತ ನಿರ್ದೇಶಕ ಸಂತೋಷ್ ಆನಂದರಾಮ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top