fbpx
ಸಮಾಚಾರ

ಅಟ್ಟಹಾಸ ಚಿತ್ರದಲ್ಲಿ ಡಾ.ರಾಜ್ ಪಾತ್ರ ಮಾಡಿದ್ದ ನಟನಿಗೆ ಬೇಕಿದೆ ಸಹಾಯ ಹಸ್ತ!

ನೋಡಲು ಥೇಟ್‌ ಡಾ. ರಾಜ್‌ ಅವರಂತೆ ಕಾಣುವ ಅಭಿಜಾತ ಕಲಾವಿದ ಜಯಕುಮಾರ್ ಕೊಡಗನೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಚಿಕಿತ್ಸೆಗೆ ಹಣ ಸಾಲದ ಹಿನ್ನೆಯಲ್ಲಿ ನೆರವಿಗೆ ಪತ್ನಿ ಪದ್ಮಾವತಿ ಹಾಗೂ ಪುತ್ರ ಮಾರುತಿ ಮನವಿ ಮಾಡಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಕಲಬುರ್ಗಿಯಲ್ಲಿ’ಖಾಯಂ ಮೊಕ್ಕಾಂ’ ನಾಟಕ ಕಂಪನಿಯೊಂದರಲ್ಲಿ ಅಭಿನಯಿಸುವಾಗ ಲಘು ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು, ಇದೇ ವೇಳೆ ಸಕ್ಕರೆ ಕಾಯಿಲೆಯೂ ಉಲ್ಬಣಿಸಿತು. ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸಿ ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ, ಹೃದಯ ನಾಳಗಳಿಗೆ ಎರಡು ಸ್ಟಂಟ್‌ ಅಳವಡಿಸಲಾಗಿದೆ. ಇನ್ನೇನು ಆರೋಗ್ಯ ಸುಧಾರಿಸಿತು. ಸಹಜ, ಸಾಮಾನ್ಯ ಜೀವನ ಶೈಲಿ ನಡೆಸಬಹುದು ಎನ್ನುವಷ್ಟರಲ್ಲಿ ಇದೀಗ ಕಿಡ್ನಿ ಕೈ ಕೊಟ್ಟಿದೆ. ವೈದ್ಯರ ಸಲಹೆ ಮೇರೆಗೆ 15 ದಿನಗಳಿಂದ ಮಣಿಪಾಲ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಆರೋಗ್ಯ ಸುಧಾರಿಸುವ ಭರವಸೆ ನೀಡಿದ್ದಾರೆ ಡಾ. ಅಂಬೋಣ.

ಈಗಾಗಲೇ 1.5 ಲಕ್ಷ ರೂ. ಖರ್ಚಾಗಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಿದ್ದಾರೆ. ಆಗ ಸುಮಾರು ಒಂದು ಲಕ್ಷ ರೂ. ಪಾವತಿಸಬೇಕಾಗುತ್ತದೆ. ಚಿಕಿತ್ಸೆ ವೆಚ್ಚ ಭರಿಸಲು ಜಯಕುಮಾರ್ ಬಳಿ ಹಣವಿಲ್ಲ. ಜಯಕುಮಾರ್ ಜತೆ ಅವರ ಪತ್ನಿ ಪದ್ಮಾವತಿ, ಮಗ ಮಾರುತಿ‌ ಇದ್ದಾರೆ. ಈ ಹಿನ್ನಲೆಯಲ್ಲಿ ಕುಟುಂಬಸ್ಥರು ಚಿತ್ರರಂಗದ ಸ್ಟಾರ್ ನಂತರ ಬಳಿ ಸಹಾಯ ಹಸ್ತ ಚಾಚಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top