fbpx
ಸಮಾಚಾರ

ಬಿಗ್​ ಬಾಸ್ 7ನೇ ಸೀಸನ್​​ ಗ್ರ್ಯಾಂಡ್​ ಓಪನಿಂಗ್: ಚಿತ್ರಮಂದಿರಗಳಲ್ಲೂ ನೇರಪ್ರಸಾರ.

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ ಕಾರ್ಯಕ್ರಮದ ಮತ್ತೊಂದು ಸೀಸನ್ನನ್ನು ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬಹು ನಿರೀಕ್ಷೆಯ ಬಿಗ್ ಬಾಸ್ 7ನೇ ಆವೃತ್ತಿ ಅಕ್ಟೋಬರ್ 13ರಂದು ಆರಂಭವಾಗಲಿದೆ. ಕಳೆದ ಆರು ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಮತ್ತೊಮ್ಮೆ ಬಿಗ್ ಬಾಸ್ ಆಗಲು ರೆಡಿಯಾಗಿದ್ದಾರೆ..

ವಿಶೇಷ ಅಂದ್ರೆ ಸೀಸನ್ 7ರ ಗ್ರಾಂಡ್ ಓಪನಿಂಗ್ ಕಾರ್ಯಕ್ರಮದ ನೇರ ಪ್ರಸಾರ ಚಿತ್ರಮಂದಿರಗಳಲ್ಲಿಯೂ ಪ್ರಸಾರವಾಗಿಲಿದೆ. ಅಕ್ಟೋಬರ್‌ 13 ಸಂಜೆ 6 ಗಂಟೆಗೆ ಲಾಂಚ್‌ ಇವೆಂಟ್‌ ಶುರುವಾಗಲಿದೆ. ಈ ಗ್ರ್ಯಾಂಡ್ ಕಾರ್ಯಕ್ರಮವನ್ನ ಮಲ್ಟಿಪ್ಲೆಕ್ಸ್‌ನ ಸ್ಕ್ರೀನ್‌ನಲ್ಲೂ ನೋಡಬಹುದು. ಬೆಂಗಳೂರಿನ 3, ಮೈಸೂರಿನ 1, ಉಡುಪಿಯ 1 ಹಾಗೂ ಮಣಿಪಾಲ್‌ನ 1 ಮಲ್ಟಿಪ್ಲೆಕ್ಸ್‌ನಲ್ಲಿ ಲಾಂಚ್‌ ಇವೆಂಟ್‌ ನೋಡಬಹುದು ಅಂತಾ ಕಲರ್ಸ್‌ ಚಾನಲ್‌ನ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡ್ಕಲ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮಂತ್ರಿ ಸ್ಕ್ವೇರ್​, ಜೆ.ಪಿ. ನಗರದ ಜೆಪಿ ನಗರ ಸೆಂಟ್ರಲ್​ ಮತ್ತು ಜಯನಗರದ ಸ್ವಾಗತ್​ ಗರುಡಾಮಾಲ್​, ಮೈಸೂರಿನ ಮಾಲ್​ ಆಫ್​ ಮೈಸೂರು, ಬೆಳಗಾವಿಯ ಹೆಡ್​ಪೋಸ್ಟ್​ ಆಫೀಸ್​ ರಸ್ತೆಯಲ್ಲಿರುವ ಮಾಲ್​ ಹಾಗೂ ಉಡುಪಿಯ ಮಣಿಪಾಲದ ಸೆಂಟ್ರಲ್​ ಸಿನಿಮಾಸ್​ನ ಐನಾಕ್ಸ್​ ಮಲ್ಟಿಪ್ಲೆಕ್ಸ್​ನಲ್ಲಿ ನೇರಪ್ರಸಾರವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top