fbpx
ಸಮಾಚಾರ

ವೀರ್ಯದಾನ ಮಾಡಲು ಹೃತಿಕ್‌ ಬಳಿ ಮಹಿಳಾ ಕ್ರಿಕೆಟರ್ ಮನವಿ!

ಬಾಲಿವುಡ್ ಸುಂದರಾಂಗ ಹೃತಿಕ್ ರೋಷನ್ ಅವರ ಸೌಂದರ್ಯಕ್ಕೆ ಮರುಳಾದ ಮಹಿಳಾ ಕ್ರಿಕೆಟರ್ ಒಬ್ಬರು ತಮ್ಮ ವೀರ್ಯ ದಾನ ಮಾಡುವಂತೆ ಮನವಿ ಮಾಡಿದ್ದಾರೆ. ಗ್ರೀಕ್ ವೀರನಂತಿರುವ ಹೃತಿಕ್ ರೋಷನ್ ಅವರು ವೀರ್ಯದಾನ ಮಾಡಬೇಕು ಎಂದು ತಮಿಳುನಾಡಿನ ಮಹಿಳಾ ಕ್ರಿಕೆಟರ್ ಭಾವನ ಅವರು ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ. ತಮ್ಮ ಜೀನ್ಸ್​ ಮುಂದುವರೆಸಲು ಹೃತಿಕ್ ಈ ಕಾರ್ಯಕ್ಕೆ ಮುಂದಾಗಬೇಕು ಎಂದು ಅವರು ಕೋರಿದ್ದಾರೆ.

 

 

ಭಾವನ ಇತ್ತೀಚೆಗೆ ತನ್ನ ಸ್ನೇಹಿತರೊಂದಿಗೆ ’ವಾರ್’ ಚಿತ್ರ ವೀಕ್ಷಿಸಿದರಂತೆ ಸಿನಿಮಾದಲ್ಲಿ ಹೃತಿಕ್ ಅವರ ಸೌಂದರ್ಯ ಕಂಡು ಮರುಳಾಗಿಹೋಗಿದ್ದಾರಂತೆ. ಕೇವಲ ತಾನು ಮಾತ್ರವಲ್ಲ ತನ್ನಂತೆ ಅನೇಕ ಯುವತಿಯರು ಹೃತಿಕ್‌ರೋಷನ್ ಅವರನ್ನು ನೋಡಿ ಇದೇ ಭಾವನೆ ಹೊಂದಿದ್ದಾರಂತೆ. ಹೃತಿಕ್ ತನ್ನ ಜೀನ್ಸ್ ಮುಂದುವರಿಸಲು ಬಯಸಿದರೆ, ಅವರು ವೀರ್ಯದಾನ ಮಾಡಬೇಕು ಎಂದು ಆಕೆ ಟ್ವೀಟ್ ಮಾಡಿದ್ದಾರೆ.

ಸದ್ಯ ‘ವಾರ್’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಲ್ಲದೆ ಬಾಲಿವುಡ್ ಇತಿಹಾಸದಲ್ಲಿ ಬಿಗ್ ಓಪನಿಂಗ್ ಪಡೆದುಕೊಂಡ ಸಿನಿಮಾಗಳ ಪೈಕಿ ‘ವಾರ್’ ಮೊದಲ ಸ್ಥಾನದಲ್ಲಿದೆ. ಹಾಲಿವುಡ್ ರೀತಿಯ ಸ್ಟಂಟ್ಸ್ ಗಳು, ಆ್ಯಕ್ಷನ್, ಕಾರ್ ಚೇಸ್ ನೋಡಿದ ಗಂಡಸರಿಗೆ ವಾರ್ ಇಷ್ಟವಾಗುವುದು ಖಂಡಿತ. ಹೃತಿಕ್ ಮತ್ತು ಟೈಗರ್ ಶ್ರಾಫ್ ಆ್ಯಕ್ಟಿಂಗ್ ಇಷ್ಟವಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top