fbpx
ಸಮಾಚಾರ

ಕನ್ನಡದ ಕ್ರಿಕೆಟಿಗನಿಗೆ ಕೂಡಿ ಬಂದ ಕಂಕಣ ಭಾಗ್ಯ: ದ. ಭಾರತದ ಖ್ಯಾತ ನಟಿಯೊಂದಿಗೆ ಮನೀಶ್ ಪಾಂಡೆ ಮದುವೆ.

ದಕ್ಷಿಣ ಭಾರತದ ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಟೀಂ ಇಂಡಿಯಾ ಆಟಗಾರ ಮನೀಶ್ ಪಾಂಡೆ ಸಜ್ಜಾಗಿದ್ದಾರೆ. ಹೌದು, ಇದೆ ವರ್ಷ ಡಿಸೆಂಬರ್ 2 ರಂದು ಮನೀಶ್ ಪಾಂಡೆ ದಕ್ಷಿಣ ಭಾರತದ ಖ್ಯಾತ ನಟಿ ಅಶ್ರಿತಾ ಶೆಟ್ಟಿ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂಬೈನಲ್ಲಿ ಈ ಜೋಡಿಯ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಮದುವೆಗೆ ಹೆಚ್ಚಿನ ಜನರಿಗೆ ಆಹ್ವಾನವಿಲ್ಲ ಎಂದು ತಿಳಿದುಬಂದಿದ್ದು ಆಪ್ತರಿಗೆ ಮಾತ್ರ ಕರೆ ನೀಡಿದ್ದಾರಂತೆ. ಡಿಸೆಂಬರ್​ನಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು ಟಿ-20 ಸರಣಿ ಆಡಲಿದೆ. ಈ ನಡುವೆ ಪಾಂಡೆ ವಿವಾಹ ನಡೆಯಲಿದೆ ಎನ್ನಲಾಗಿದೆ.

ಮುಂಬೈ ಮೂಲದವರಾಗಿರುವ 26 ವರ್ಷ ಪ್ರಾಯದ ಅಶ್ರಿತಾ ಶೆಟ್ಟಿ ತಮಿಳು ಚಿತ್ರರಂಗದ ಖ್ಯಾತ ನಟಿಯಾಗಿದ್ದು ಈ ಹಿಂದೆ ಉದಯಂ ಎನ್​ಎಚ್​​4, ಇಂದ್ರಜಿತ್, ಒರು ಕನ್ನಿಯುಂ ಮೂನು ಸೇರಿದಂತೆ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top