fbpx
ಸಮಾಚಾರ

ಸುಮಲತಾ ಮನೆಗೆ ರಾಕಿಂಗ್ ಜೋಡಿ: ಅಂಬಿ ಮೀಸೆ ಮೇಲೆ ಕೈಯಿಟ್ಟ ರಾಧಿಕಾ ಯಶ್ ಪುತ್ರಿ.

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮಗಳು ಐರಾ ಜೊತೆ ಮಂಡ್ಯ ಸಂಸದೆ ಸುಮಲತಾ ಅವರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಯಶ್ ಮಗಳು ಅಂಬಿ ಫೋಟೋ ನೋಡಿ ಖುಷಿಯಿಂದ ಅಂಬಿ ಮೀಸೆ ಮೇಲೆ ಕೈಯಿಟ್ಟಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ರಾಜಕೀಯ ಕ್ಷೇತ್ರದಲ್ಲಿ ಬ್ಯೂಸಿಯಾಗಿರುವ ಸಂಸದೆ ಸುಮಲತಾ ಅಂಬರೀಶ್ ಪುಟಾಣಿ ಆಯ್ರಾಳ ಜೊತೆ ಕೆಲ ಕಾಲ ಆಟ ಆಡಿ ಸುಂದರ ಸಮಯವನ್ನು ಕಳೆದಿದ್ದಾರೆ. ಇನ್ನು ಈ ಪೋಟೋಗಳನ್ನು ಸುಮಲತಾ ಅವರು ಸಾಮಾಜಿಕ ಜಾಲತಾಣದಲ್ಲಿ “ಈ ಮುದ್ದಾದ ಮಗು ಭೇಟಿ ಮಾಡಲು ಬಂದಿತ್ತು” ಎಂದು ಬರೆದು ಹಂಚಿಕೊಂಡಿದ್ದಾರೆ,.

ಮಂಡ್ಯ ಚುನಾವಣೆ ಬಳಿಕ ಸುಮಲತಾ ಮತ್ತು ಯಶ್ ಯಾವುದೇ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ದಂಪತಿ ಮಗಳ ಸಮೇತ ಸುಮಲತಾ ಅವರನ್ನು ಭೇಟಿ ಮಾಡಿ ಮಾತನಾಡಿಸಿಕೊಂಡು ಬಂದಿದ್ದಾರೆ. ಯಶ್ ‘ಕೆಜಿಎಫ್-2’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ರಾಧಿಕಾ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈಗ ಇಬ್ಬರು ತಮ್ಮ ಮಗಳು ಐರಾಳನ್ನು ರೆಬೆಲ್ ಸ್ಟಾರ್ ಅಂಬರೀಶ್ ಮನೆಗೆ ಕರೆದುಕೊಂಡು ಹೋಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top