fbpx
ಸಮಾಚಾರ

ಬ್ರೇಕಿಂಗ್ ನ್ಯೂಸ್ ಕೊಟ್ಟ ರವಿ ಬೆಳಗೆರೆ: ಬಿಗ್ ಬಾಸ್ ಮನೆಗೆ ಹೋಗುತ್ತಿರುವುದು ನಿಜ.

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ ಕಾರ್ಯಕ್ರಮದ ಮತ್ತೊಂದು ಸೀಸನ್ನನ್ನು ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬಹು ನಿರೀಕ್ಷೆಯ ಬಿಗ್ ಬಾಸ್ 7ನೇ ಆವೃತ್ತಿ ನಾಳೆ (ಅಕ್ಟೋಬರ್ 13ರಂದು) ಆರಂಭವಾಗಲಿದೆ. ಕಳೆದ ಆರು ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಮತ್ತೊಮ್ಮೆ ಬಿಗ್ ಬಾಸ್ ಆಗಲು ರೆಡಿಯಾಗಿದ್ದಾರೆ..

 

 

ಇಂಥಾ ಬಿಗ್ ಬಾಸ್ ಮನೆಗೆ ಈ ಭಾರಿ ಅವರು ಹೋಗ್ತಾರಂತೆ, ಇವರು ಹೋಗ್ತಾರಂತೆ ಎಂಬಂತ ರೂಮರುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ಹರಿದಾಡುತ್ತಿದ್ದಾವೆ. ಆದರೆ ಇದೀಗ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ದೊಡ್ಮನೆ ಪ್ರವೇಶ ಮಾಡುವುದು ಕನ್ಫರ್ಮ್ ಆಗಿದೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಬಗ್ಗೆ ಸ್ವತಃ ರವಿ ಬೆಳಗೆರೆ ಅವರೇ ಫೇಸ್ ಬುಕ್ ನಲ್ಲಿ ಬಹಿರಂಗ ಪಡಿಸಿದ್ದಾರೆ. ಆದ್ರೆ ಸ್ಟೇಟಸ್ ಹಾಕಿ ಕೆಲವೇ ಕ್ಷಣದಲ್ಲಿ ಡಿಲಿಟ್ ಮಾಡಿದ್ದಾರೆ.

“ಪ್ರಿಯರೆ, ನಾನು ಕೆಲವಷ್ಟು ದಿನಗಳ ತನಕ ನಗೂಢ ಲೋಕಕ್ಕೆ ಹೋಗುತ್ತಿದ್ದೇನೆ, ಹೀಗಾಗಿ ಕೆಲಕಾಲ ನಾನು ಫೋನಿಗೆ, ಫೇಸ್ಬುಕ್ ಗೆ, ಆಫೀಸಿನಲ್ಲಿನ ಭೇಟಿಗೆ ಸಿಗುವುದಿಲ್ಲ. ನಿಗೂಢ ವಾಸ ಮುಗಿ ಬಂದ ಮೇಲೆ ಎಂದಿನಂತೆ ನಮ್ಮ ಸಲ್ಲಾಪ ಜಾರಿ” ಎಂದು ಬರೆದುಕೊಂಡು ಕೆಲವೇ ಹೊತ್ತಿನ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಅಲ್ಲಿಗೆ ನಿರೀಕ್ಷೆಯಂತೆ ರವಿ ಬೆಳಗೆರೆ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವುದು ಪಕ್ಕಾ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top