fbpx
biggboss

ಬಿಗ್ ಬಾಸ್ ಸೀಸನ್ 7 ಶೋ ಆರಂಭಕ್ಕೆ ಕ್ಷಣಗಣನೆ: ಹೀಗಿದೆ ಸಂಭಾವ್ಯ ಸ್ಪರ್ಧಿಗಳ ಅಂತಿಮ ಪಟ್ಟಿ.

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ ಕಾರ್ಯಕ್ರಮದ ಮತ್ತೊಂದು ಸೀಸನ್ನನ್ನು ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬಹು ನಿರೀಕ್ಷೆಯ ಬಿಗ್ ಬಾಸ್ 7ನೇ ಆವೃತ್ತಿ ನಾಳೆ (ಅಕ್ಟೋಬರ್ 13ರಂದು) ಆರಂಭವಾಗಲಿದೆ. ಕಳೆದ ಆರು ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಮತ್ತೊಮ್ಮೆ ಬಿಗ್ ಬಾಸ್ ಆಗಲು ರೆಡಿಯಾಗಿದ್ದಾರೆ..

ಇಂಥಾ ಬಿಗ್ ಬಾಸ್ ಮನೆಗೆ ಈ ಭಾರಿ ಅವರು ಹೋಗ್ತಾರಂತೆ, ಇವರು ಹೋಗ್ತಾರಂತೆ ಎಂಬಂತ ರೂಮರುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ಹರಿದಾಡುತ್ತಿದ್ದಾವೆ. ಆದರೆ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿರುವ ಸ್ಪರ್ಧಿಗಳ ಪಟ್ಟಿ ಗೊತ್ತಾಗಿದ್ದು ಆ EXCLUSIVE ಡೀಟೈಲ್ಸ್ ಇಲ್ಲಿದೆ. ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯಲಿರುವ ಸಂಭಾವ್ಯರ ಹೆಸರು.
ಕುರಿ ಪ್ರತಾಪ್ (ಹಾಸ್ಯ ನಟ), ವಿಜಯಲಕ್ಷ್ಮಿ (ನಟಿ), ಶ್ವೇತಾ ಪ್ರಸಾದ್ (ರಾಧಾ ರಾಮನ ಧಾರಾವಾಹಿ ನಟಿ), ಶಿವರಾಜ್ ಕೆ.ಆರ್ ಪೇಟೆ (ಹಾಸ್ಯ ನಟ), ನಟಿ ರಾಗಿಣಿ, ಗಾಯಕ ಹನುಮಂತ, ನಟಿ ಪಾರುಲ್ ಯಾದವ್, ಸಿತಾರಾ ರಾವಲ್ (ಟಿಕ್ ಟಾಕ್ ಖ್ಯಾತಿ), ಉದಯೋನ್ಮುಖ ನಟಿ ನೇಹಾ ಪಾಟೀಲ್, ನಟ ಶ್ರೀನಗರ ಕಿಟ್ಟಿ, ಜಿಗರ್ಥಂಡ ನಟ ರಾಹುಲ್, ದುನಿಯಾ ರಶ್ಮಿ, ಗಾಯಕಿ ಶಮಿತಾ ಮಲ್ನಾಡ್, ಗುರುಲಿಂಗ ಸ್ವಾಮಿಜಿ, ನಟಿ ರಂಜಿನಿ ರಾಘವನ್(ಪುಟ್ಟ ಗೌರಿ ಮದುವೆ), ಹಾಗೂ ಮುಂದಾದವರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top