fbpx
ಸಮಾಚಾರ

‘ದೀಪಾವಳಿ’ಯನ್ನು ‘ದಿವಾಳಿ’ ಮಾಡಲು ಬಂದ ಫ್ಲಿಪ್ ಕಾರ್ಟ್

ದೀಪಗಳ ಹಬ್ಬ , ಅಂಧಕಾರವನ್ನು ಅಳಿಸಿ ಕತ್ತಲಿಂದ ಬೆಳಕಿನ ಕಡೆಗೆ ಜೀವನ ಎಂಬ ಸಂದೇಶವನ್ನು ಸಾರುವ ಹಬ್ಬ , ಗ್ರಾಮೀಣ ಭಾಗದಲ್ಲಿ ಅಚ್ಚ ಕನ್ನಡ ಪದ ಸೊಡರು ಹಬ್ಬ ಎಂದು ಕರೆಯುವ ಪ್ರತೀತಿ ಕೂಡ ಉಂಟು .

ಇತ್ತೀಚಿನ ದಿನಗಳಲ್ಲಿ ಮೂಲ ಕನ್ನಡ ಪದಗಳನ್ನು ಕರ್ನಾಟಕದಿಂದ ಹೊರದೂಡಿ ಹಿಂದಿ ,ಇಂಗ್ಲೀಷ್ ಪದಬಳಕೆಯ ಫ್ಯಾಷನ್ ಹೆಚ್ಚಿದೆ . ಇದಕ್ಕೆ ಸರ್ಕಾರದ ಭಾಷಾ ನೀತಿಯ ಮಲತಾಯಿ ಧೋರಣೆ ಎಷ್ಟಿದೆಯೋ ಅಷ್ಟೇ ನಮ್ಮ ಖಾಸಗಿ ಕಂಪನಿಗಳ ಪಾತ್ರವೂ ಅಷ್ಟೇ ಇದೆ.

ಹಬ್ಬದ ದಿನಗಳು ಹತ್ತಿರ ಬರುತ್ತಿದ್ದಂತೆ, ಗ್ರಾಹಕರಿಗೆ ಶುಭಾಶಯ ತಿಳಿಸಲು ಎಲ್ಲಾ ಉದ್ದಿಮೆಗಳೂ ಮುಂದೆ ಬರುತ್ತವೆ. ಕನ್ನಡಿಗರಿಗೆ ಚಿರಪರಿಚಿತ ಹೆಸರುಗಳಾದ ದಸರಾ, ದೀಪಾವಳಿ ಹಬ್ಬದ ಬದಲಿಗೆ, ಹಲವಾರು ಉದ್ದಿಮೆಗಳು ಕನ್ನಡಿಗರಿಗೆ ‘ದುಶೆರಾ’, ‘ದಿವಾಳಿ’ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಿವೆ.

ಸದ್ಯ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು ವಿವಿಧ ಉದ್ದಿಮೆಗಳು ಅದಾಗಲೇ ‘ದಿವಾಳಿ, ದಿವಾಳಿ’ ಎನ್ನುತ್ತಾ ಗೀಳಿಡಲು ಆರಂಭಿಸಿವೆ. ಹಾಗೆಯೆ ಪ್ರಮುಖ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ಫ್ಲಿಪ್ ಕಾರ್ಟ್ ಹಬ್ಬಕ್ಕೆ ವಿಶೇಷವಾಗಿ ಆಫರುಗಳನ್ನು ನೀಡಿದ್ದು ಗ್ರಾಹಕರನ್ನು ಆಕರ್ಷಿಸುತ್ತಿದೆ.. ಆದರೆ ಈ ಆಫರ್ ಹೆಸರಿನಲ್ಲಿ ದೀಪಾವಳಿಯನ್ನು ‘ದಿವಾಳಿ’ ಎಂದು ಮಾಡಿ ‘ದಿವಾಳಿ ಮೆಗಾ ಸೇಲ್’ ಎಂದು ಪ್ರದರ್ಶಿತ್ತಿದೆ.

‘ದೀಪಾವಳಿ’ ಎಂಬ ಸುಂದರ ಅಕ್ಷರಪುಂಜವಿರುವಾಗ ನಾವ್ಯಾಕೆ ಮತ್ತೊಬ್ಬರಿಂದ ದಿವಾಳಿ ಎಂಬ ಪದವನ್ನು ಎರವಲು ಪಡೆಯಬೇಕು? ಆ ಪದದೊಂದಿಗೆ ನಮ್ಮತನವನ್ನೂ ದಿವಾಳಿ ಮಾಡಿಕೊಳ್ಳಬೇಕು? ಎಂದು ಕನ್ನಡಿಗರು ಪ್ಲಿಪ್ ಕಾರ್ಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top