fbpx
ಸಮಾಚಾರ

2ನೇ ಮಗುವಿನ ನಿರೀಕ್ಷೆಯಲ್ಲಿ ‘ಕುರುಕ್ಷೇತ್ರ ದೌಪದಿ’ ಖ್ಯಾತಿಯ ನಟಿ ಸ್ನೇಹಾ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದಲ್ಲಿ ದ್ರೌಪದಿ ಪಾತ್ರದಲ್ಲಿ ಮಿಂಚಿದ್ದ ನಟಿ ಸ್ನೇಹಾ ಈಗ ಎರಡನೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗುರುವಾರ (ಅಕ್ಟೋಬರ್ 3) ಸೀಮಂತ ಕಾರ್ಯಕ್ರಮ ನಡೆದಿದ್ದು ಇದಕ್ಕೆ ಸಂಬಂಧಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

 

 

ಶಾಸ್ತ್ರೋಕ್ತವಾಗಿ ನಡೆದ ಸೀಮಂತ ಕಾರ್ಯಕ್ರಮಕ್ಕೆ ಕುಟುಂಬಿಕರು, ಆತ್ಮೀಯರು ಹಾಜರಾಗಿದ್ದರು.ನಟಿ ಸ್ನೇಹಾ ಹಳದಿ ಮತ್ತು ಕೆಂಪು ಬಣ್ಣದ ಕಾಂಬಿನೇಷನ್ ನ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ನಾಲ್ಕು ತಿಂಗಳ ಹಿಂದೆಯಷ್ಟೇ ಸ್ನೇಹಾ ಅವರು ತಾವು ಮತ್ತೊಮ್ಮೆ ತಾಯಿ ಆಗುತ್ತಿರುವ ವಿಚಾರವನ್ನು ಹೈಏಳಿಕೊಂಡಿದ್ದರು.

2009ರಲ್ಲಿ ಸ್ನೇಹಾ ಹಾಗೂ ತಮಿಳು ನಟ ಪ್ರಸನ್ನ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಂಡಿದ್ದರು. ಬಳಿಕ ಗುರುಹಿರಿಯರ ಒಪ್ಪಿಗೆ ಪಡೆದ ಈ ಜೋಡಿ 2012ರಲ್ಲಿ ಸಪ್ತಪದಿ ತುಳಿಯಿತು. 2015ರಲ್ಲಿ ಈ ಜೋಡಿಗೆ ಮುದ್ದಾದ ಗಂಡುಮಗು ಜನಿಸಿತು. ಈ ಮಗುವಿಗೆ ವಿಹಾನ್ ಎಂದು ಹೆಸರಿಡಲಾಗಿದೆ. ಇದೀಗ ತುಂಬು ಗರ್ಭಿಣಿಯಾಗಿದ್ದು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top