fbpx
biggboss

ಬಿಗ್ ಬಾಸ್ ಗ್ರಾಂಡ್ ಓಪನಿಂಗ್ ಕಾರ್ಯಕ್ರಮವನ್ನು ಚಿತ್ರಮಂದಿರದಲ್ಲಿ ನೋಡಲು ಇಲ್ಲಿದೆ ಅವಕಾಶ

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ ಕಾರ್ಯಕ್ರಮದ ಮತ್ತೊಂದು ಸೀಸನ್ನನ್ನು ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬಹು ನಿರೀಕ್ಷೆಯ ಬಿಗ್ ಬಾಸ್ 7ನೇ ಆವೃತ್ತಿ ಇಂದು (ಅಕ್ಟೋಬರ್ 13ರಂದು) ಆರಂಭವಾಗಲಿದೆ. ಕಳೆದ ಆರು ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಮತ್ತೊಮ್ಮೆ ಬಿಗ್ ಬಾಸ್ ಆಗಲು ರೆಡಿಯಾಗಿದ್ದಾರೆ..

ವಿಶೇಷ ಅಂದ್ರೆ ಸೀಸನ್ 7ರ ಗ್ರಾಂಡ್ ಓಪನಿಂಗ್ ಕಾರ್ಯಕ್ರಮದ ನೇರ ಪ್ರಸಾರ ಚಿತ್ರಮಂದಿರಗಳಲ್ಲಿಯೂ ಪ್ರಸಾರವಾಗಿಲಿದೆ. ಅಕ್ಟೋಬರ್‌ 13 ಸಂಜೆ 6 ಗಂಟೆಗೆ ಲಾಂಚ್‌ ಇವೆಂಟ್‌ ಶುರುವಾಗಲಿದೆ. ಈ ಗ್ರ್ಯಾಂಡ್ ಕಾರ್ಯಕ್ರಮವನ್ನ ಮಲ್ಟಿಪ್ಲೆಕ್ಸ್‌ನ ಸ್ಕ್ರೀನ್‌ನಲ್ಲೂ ನೋಡಬಹುದು. ಬೆಂಗಳೂರಿನ 3, ಮೈಸೂರಿನ 1, ಉಡುಪಿಯ 1 ಹಾಗೂ ಮಣಿಪಾಲ್‌ನ 1 ಮಲ್ಟಿಪ್ಲೆಕ್ಸ್‌ನಲ್ಲಿ ಲಾಂಚ್‌ ಇವೆಂಟ್‌ ನೋಡಬಹುದು ಅಂತಾ ಕಲರ್ಸ್‌ ಚಾನಲ್‌ನ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡ್ಕಲ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮಂತ್ರಿ ಸ್ಕ್ವೇರ್​, ಜೆ.ಪಿ. ನಗರದ ಜೆಪಿ ನಗರ ಸೆಂಟ್ರಲ್​ ಮತ್ತು ಜಯನಗರದ ಸ್ವಾಗತ್​ ಗರುಡಾಮಾಲ್​, ಮೈಸೂರಿನ ಮಾಲ್​ ಆಫ್​ ಮೈಸೂರು, ಬೆಳಗಾವಿಯ ಹೆಡ್​ಪೋಸ್ಟ್​ ಆಫೀಸ್​ ರಸ್ತೆಯಲ್ಲಿರುವ ಮಾಲ್​ ಹಾಗೂ ಉಡುಪಿಯ ಮಣಿಪಾಲದ ಸೆಂಟ್ರಲ್​ ಸಿನಿಮಾಸ್​ನ ಐನಾಕ್ಸ್​ ಮಲ್ಟಿಪ್ಲೆಕ್ಸ್​ನಲ್ಲಿ ನೇರಪ್ರಸಾರವಾಗಲಿದೆ. ನೇರ ಪ್ರಸಾರವನ್ನು ನೋಡಲು ಬಯಸುವವರು ಮೊದಲೇ ಟಿಕೆಟ್ ಗಳನ್ನು ಕಾಯ್ದಿರಿಸಬೇಕಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top