fbpx
ಸಮಾಚಾರ

ಡಿಕೆ ಶಿವಕುಮಾರ್ ತಾಯಿ ಗೌರಮ್ಮಗೂ ಇಡಿ ಸಮನ್ಸ್!

ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್ ಅಕ್ರಮ ಹಣಕಾಸು ವಹಿವಾಟು ಪ್ರಕರಣದಲ್ಲಿ ಇದೀಗ ಅವರ ತಾಯಿ ಗೌರಮ್ಮ ಅವರನ್ನೂ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ. ಈ ಸಂಬಂಧ ಅವರಿಗೆ ಸಮನ್ಸ್‌ ಜಾರಿ ಮಾಡಿದೆ.

ಗೌರಮ್ಮ ಹಾಗೂ ಡಿಕೆ ಶಿವಕುಮಾರ್, ಸುರೇಶ್ ಮಧ್ಯೆ ಹಣದ ವ್ಯವಹಾರವೂ ನಡೆದಿದೆ, ಗೌರಮ್ಮ ಅವರ ಬಳಿ 273 ಕೋಟಿ ರೂ ಬೇನಾಮಿ ಆಸ್ತಿ ಪತ್ತೆಯಾಗಿದೆ. ಹಾಗೆಯೇ ಐಶ್ವರ್ಯಗೂ 5 ಎಕರೆ ಜಮೀನು ಗಿಫ್ಟ್‌ ಡೀಡ್ ಆಗಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಗೌರಮ್ಮ ಮೊಮ್ಮಗಳು ಐಶ್ವರ್ಯಾಗಳಿಗೆ ಅನೇಕ ಉಡುಗೊರೆಗಳನ್ನು ನೀಡಿದ್ದಾರೆ. ಈ ಹಿಂದೆ ಡಿಕೆ ಶಿವಕುಮಾರ್​ ಮಗಳು ಐಶ್ವರ್ಯ ವಿಚಾರಣೆ ನಡೆಸಿದ ಇಡಿಗೆ ಗೌರಮ್ಮ ಖಾತೆಯಿಂದ ಅನೇಕ ಆಸ್ತಿಗಳು ವರ್ಗಾವಣೆಯಾಗಿರುವುದಾಗಿ ತಿಳಿಸಿದ್ದರು. ಈ ಹಿನ್ನೆಲೆ ಈ ಕುರಿತ ವಿಚಾರಣೆಗೆ ಅವರಿಗೆ ಸಮನ್ಸ್ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ, ಡಿಕೆ ಸುರೇಶ್​, ತಾಯಿ ಗೌರಮ್ಮ ಅವರಿಗೂ ಸಮನ್ಸ್ ನೀಡಿದ್ದು, ನಾಳೆ‌ ವಿಚಾರಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಅವರಿಗೆ ವಯಸ್ಸಾಗಿದೆ ಬರುತ್ತಾರೋ, ಇಲ್ಲವೋ ಗೊತ್ತಿಲ್ಲ. ಅವರು ಏನ್ ಮಾಡ್ತಾರೆ ಕಾದು ನೋಡಬೇಕು. ನಾಳೆ ವಿಚಾರಣೆ ಬಂದರೂ ಬರಬಹುದು ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top