fbpx
ಸಮಾಚಾರ

ಬಿಗ್‌ಬಾಸ್‌ಗೆ ಕಾಲಿಡುತ್ತಿದ್ದಂತೆ ಸುದೀಪ್ ಮೇಲೆ ಆಪಾದನೆ ಮಾಡಿದ ರವಿ ಬೆಳಗೆರೆ: ಏನದು?

ಕನ್ನಡ ಕಿರುತೆರೆ ವೀಕ್ಷಕರ ಮೆಚ್ಚಿನ ರಿಯಾಲಿಟ್ ಶೋ ಬಿಗ್ ಬಾಸ್ ಸೀಸನ್ 7 ಆರಂಭವಾಗಿದೆ. ಅಕ್ಟೋಬರ್ 13ರ ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಮೂಲಕ ಸ್ಪರ್ಧಿಗಳನ್ನು ಒಬ್ಬೊಬ್ಬರಾಗಿ ಮನೆ ಕಳುಹಿಸಲಾಯಿತು. ನಿರೀಕ್ಷೆಯಂತೆ ಬಿಗ್ ಬಾಸ್ ಮನೆಗೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಎಂಟ್ರಿ ಕೊಟ್ಟಿದ್ದಾರೆ..

ರವಿ ಬೆಳಗೆರೆ ವೇದಿಕೆ ಮೇಲೆ ಬರುತ್ತಿದ್ದಂತೆ ನಿರೂಪಕ ಸುದೀಪ್ ಅವರನ್ನು “ಸುದೀಪ್ ನಿಮ್ಮ ಮೇಲೆ ಒಂದು ದೊಡ್ಡ ಆಪಾದನೆ ಇದೆ” ಎಂದು ಹೇಳಿ ನೋಡುಗರಿಗೆ ಶಾಕ್ ನೀಡಿದರು. ರವಿ ಬೆಳಗೆರೆ ಆಪಾದನೆ ಮಾಡುತ್ತಿದ್ದಾರೆ ಅಂದ್ರೆ ಏನಿರ ಬಹುದು ಎಂದು ಅಭಿಮಾನಿಗಳು ಕೂಡ ಒಮ್ಮೆ ಶಾಕ್ ಆಗಿದ್ರು. ಆದರೆ ರವಿ ಬೆಳೆಗೆರೆ ಅವರು ಆಪಾದನೆಯ ಹೆಸರಿನಲ್ಲಿ ಸುದೀಪ್ ಅವರನ್ನು ಹೊಗಳಿದರು.

ರವಿ ಬೆಳಗೆರೆ ಅವರು ಬಿಗ್ ಬಾಸ್ ವೇದಿಕೆಗೆ ಎಂಟ್ರಿ ಕೊಡುತ್ತಿದ್ದಂತೆ ಸುದೀಪ್ ನಿಮ್ಮ ಮೆಲೆ ದೊಡ್ಡ ಆಪಾದನೆ ಇದೆ ಎಂದು ಹೇಳುತ್ತಾ “ಸುದೀಪ್ ನೀವು ಕನ್ನಡದ ಅಮಿತಾಭ್ ಬಚ್ಚನ್” ಎಂದು ಹೇಳಿದರು. ಅಷ್ಟೇ ಅಲ್ಲದೆ ವೇದಿಕೆಯ ಮೇಲೆಯೇ ಸುದೀಪ್ ಅವರನ್ನು ಹಾಡಿ ಹೊಗಳಿದ ಬೆಳೆಗೆರೆ “ಸುದೀಪ್ ನೀವು ಅಂದ್ರೆ ಇಷ್ಟ. ನಟನಾಗಿ ಮತ್ತು ಒಬ್ಬ ಮನುಷ್ಯನಾಗಿ ನನಗೆ ನೀವು ತುಂಬ ಇಷ್ಟ. ನೀವು ಇನ್ನೂ ಎತ್ತರಕ್ಕೆ ಬೆಳೆಯಬೇಕು.. ನಿಮ್ಮನ್ನ ಮೆಚ್ಚಿಸೋಕೆ ಈ ಮಾತನ್ನ ನಾನು ಹೇಳುತ್ತಿಲ್ಲ. ನಾನು ಯಾರನ್ನೂ ಅಷ್ಟು ಸುಲಭವಾಗಿ ಹೊಗಳುವುದಿಲ್ಲ” ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top