fbpx
ಸಮಾಚಾರ

“ಹೆಂಡತಿಗೆ ಹೊಡೆಯುವವನು ಗಂಡಸೇ ಅಲ್ಲ”- ರಾಜು ತಾಳಿಕೋಟಿ ವಿರುದ್ಧ ದೀಪಿಕಾ ಗರಂ.

ಬಿಗ್ ಬಾಸ್ ಕನ್ನಡ ಸೀಸನ್ ೭ ಮನೆಯಲ್ಲಿ ಇನ್ನೂ ಯಾವುದೇ ರೀತಿ ಜಗಳ ಸ್ಟಾರ್ಟ್ ಆಗಿಲ್ಲ ಆದರೆ ರಾಜು ತಾಳಿಕೋಟೆ ವಿರುದ್ಧ ನಟಿ ದೀಪಿಕಾ ದಾಸ್ ಅವರು ಅಸಮಾಧಾನಗೊಂಡಿದ್ದಾರೆ. ಅಷ್ಟೇ ಅಲ್ಲದೆ ದೀಪಿಕಾ ದಾಸ್​ ಹಾಗೂ ರಾಜು ತಾಳಿಕೋಟೆ ನಡುವೆ ಸಣ್ಣ ವಾಗ್ವಾದ ಕೂಡ ನಡೆದಿದೆ.

ರಾಜು ತಾಳಿಕೋಟೆ ಅವರು ದೀಪಿಕಾ ಅವರನ್ನು ಮಾತನಾಡಿಸುವಾಗಲೆಲ್ಲಾ ಬೆನ್ನಿಗೆ ಹೊಡೆದು ಮಾತನಾಡುಸುತ್ತಿದ್ದಾರಂತೆ ಹೀಗಂತ ದೀಪಿಕಾ ಅವರೇ ಆಪಾದನೆ ಮಾಡಿದ್ದಾರೆ.. ಇನ್ನು ಎರಡನೇ ದಿನ ಮಧ್ಯಾಹ್ನ ಮನೆಯ ಸದಸ್ಯರೆಲ್ಲರೂ ಗಾರ್ಡನ್ ಏರಿಯಾದಿಂದ ಮನೆ ಒಳಗೆ ಹೋಗುತ್ತಿದ್ದರು. ಈ ವೇಳೆ ದೀಪಿಕಾ ದಾಸ್​ ಅವರ ಬೆನ್ನಿಗೆ ಹೊಡೆದು ಒಳ ಬರುವಂತೆ ಸೂಚಿಸಿದ್ದಾರೆ.

 

 

ಈ ವೇಳೆ ದೀಪಿಕಾ ಕೋಪಗೊಂಡ ದೀಪಿಕಾ ರಾಜು ತಾಳಿಕೋಟೆ ಮೇಲೆ ಸಿಟ್ಟಾಗಿದ್ದಾರೆ. ಅಷ್ಟೇ ಅಲ್ಲ, ಇನ್ಮುಂದೆ ಈ ರೀತಿ ಮಾಡಬೇಡಿ, ಮೈಮುಟ್ಟಿ ಮಾತನಾಡಿಸಬೇಡಿ ಎಂದು ಹೇಳಿದರು. ಆಗ ‘ಮುಂದೆ ಬರುವ ನಿಮ್ಮ ಗಂಡ ಹೊಡೆದರೆ ಏನು ಮಾಡ್ತೀರಿ’ ಎಂದು ರಾಜು ಪ್ರಶ್ನೆ ಮಾಡಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ದೀಪಿಕಾ, ‘ಹೆಣ್ಣುಮಕ್ಕಳ ಮೇಲೆ ಕೈಮಾಡುವ ಹಕ್ಕನ್ನು ಗಂಡಸರಿಗೆ ಯಾರು ಕೊಟ್ಟಿದ್ದಾರೆ? ಹಾಗೆ ಹೊಡೆಯುವವನು ಗಂಡಸೇ ಅಲ್ಲ.. ಗಂಡ ಆದವನು ಹೆಂಡತಿಗೆ ಹೊಡೆದರೆ ಅವನು ಗಂಡಸೇ ಅಲ್ಲ, ಮಾತಿನಲ್ಲಿ ಬುದ್ಧಿ ಹೇಳಲಿ. ಆದರೆ, ಹೊಡೆಯಬಾರದು’ ಎಂದಿದ್ದಾರೆ.

ಈ ವಿಚಾರ ಸದ್ಯ ಬಿಗ್ ಬಾಸ್ ಮನೆಯಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top