fbpx
ಭವಿಷ್ಯ

ಅಕ್ಟೋಬರ್ 17: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಗುರುವಾರ, ಅಕ್ಟೋಬರ್ 17 2019
ಸೂರ್ಯೋದಯ : 6:09 am
ಸೂರ್ಯಾಸ್ತ: 5:59 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಆಶ್ವೇಜ
ಪಕ್ಷ : ಕೃಷ್ಣಪಕ್ಷ
ತಿಥಿ : ತೃತೀಯಾ 06:48
ನಕ್ಷತ್ರ: ಕೃತಿಕೆ 15:52
ಯೋಗ:ವ್ಯತಿಪಾತ 28:15
ಕರಣ: ವಿಷ್ಟಿ 06:48 ಬಾವ 19:11

ಅಭಿಜಿತ್ ಮುಹುರ್ತ: 11:41 am – 12:28 pm
ಅಮೃತಕಾಲ : 1:19 pm – 3:01 pm

ರಾಹುಕಾಲ- 1:32 pm – 3:00 pm
ಯಮಗಂಡ ಕಾಲ- 6:13 am – 7:41 am
ಗುಳಿಕ ಕಾಲ- 9:09 am – 10:37 am

 

 

 

ನಿಮ್ಮದಲ್ಲದ ಕೆಲಸವನ್ನು ಅನವಶ್ಯಕವಾಗಿ ಮಾಡಲು ಮುಂದಾಗದಿರಿ. ಇದರಿಂದ ಅಪಾಯಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಬಂಧುಬಾಂಧವರಿಗೆ ಸಹಾಯಹಸ್ತ ನೀಡುವ ವಿಚಾರದಲ್ಲಿ ಎರಡು ಬಾರಿ ಚಿಂತಿಸಿ ಮುಂದುವರೆಯಿರಿ.

ಆತುರಗಾರನಿಗೆ ಬುದ್ಧಿಮಟ್ಟ ಎಂಬ ಗಾದೆ ಮಾತು ನಿಮಗೆ ಅರಿವಾಗುವುದು. ಆತುರದಿಂದ ಮಾಡಿದ ವಾದ ನಿಮಗೆ ಮುಖಭಂಗವನ್ನುಂಟು ಮಾಡುವುದು. ಹಾಗಾಗಿ ತಾಳ್ಮೆಯಿಂದ ಎದುರಾಳಿಯ ಮಾತನ್ನು ಆಲಿಸಿ ವಾದ ಮಾಡಿದಲ್ಲಿ ಜಯ ನಿಮ್ಮದಾಗುವುದು.

 

ಕಾರಣವಿಲ್ಲದೆ ಜನರು ನಿಮ್ಮ ಮೇಲೆ ಆರೋಪ ಮಾಡುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಮನೋಬಲವೇ ಕುಗ್ಗಿದಂತೆ ಆಗುವುದು. ವಿಷ್ಣು ಸಹಸ್ರನಾಮವನ್ನು ತಪ್ಪದೆ ಪಾರಾಯಣ ಮಾಡಿ. ಹಿತೈಷಿಗಳ ಹಿತವಚನ ಪಾಲಿಸಿ.

 

ಖರ್ಚಿನ ದಾರಿಗಳು ಅನೇಕ ರೀತಿಯಲ್ಲಿ ತೆರೆದುಕೊಳ್ಳುವುದು. ಹಾಗಾಗಿ ಕೂಡಿಟ್ಟ ಹಣವು ನೀರಿನಂತೆ ಖರ್ಚಾಗುವುದು. ಅನಗತ್ಯ ವಸ್ತುಗಳ ಖರೀದಿಯನ್ನು ಮಾಡದಿರುವುದು ಕ್ಷೇಮಕರ.

 

 

ಆರ್ಥಿಕವಾಗಿ ಅಲ್ಪ ಅನಾನುಕೂಲವಾದರೂ ಹಮ್ಮಿಕೊಂಡ ಕಾರ್ಯಗಳನ್ನು ಪೂರೈಸಲು ತೊಂದರೆ ಆಗುವುದಿಲ್ಲ. ಆರಂಭಿಸಿದ ಕೆಲಸಗಳು ಸುಸೂತ್ರವಾಗಿ ಪೂರ್ಣಗೊಳ್ಳುವವು. ಮಕ್ಕಳೊಂದಿಗೆ ಬೆರೆತು ಮನಸ್ಸು ಹಗುರ ಮಾಡಿಕೊಳ್ಳುವಿರಿ.

 

 

ಹಿರಿಯರ ಮಾತನ್ನು ಧಿಕ್ಕರಿಸಿ ಹಮ್ಮಿಕೊಂಡ ಕಾರ್ಯದಲ್ಲಿ ಅಪಜಯ ಹೊಂದುವಿರಿ. ದೇಹಾಲಸ್ಯವಿದ್ದರೆ ವಿಶ್ರಾಂತಿ ಪಡೆಯಿರಿ. ನಿಮ್ಮ ಕೋಪ-ತಾಪಗಳನ್ನು ಮಡದಿ-ಮಕ್ಕಳ ಮೇಲೆ ಹಾಕದಿರಿ.

 

 

ಸ್ನೇಹಿತರು ಆಡುವ ಮಾತುಗಳಿಂದ ಬೇಸರವಾಗುವುದು. ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಆದಷ್ಟು ತಾಳ್ಮೆಯಿಂದ ಇರಿ. ಮನೆಯ ಸಮೀಪವಿರುವ ದೇವಾಲಯಕ್ಕೆ ಹೋಗಿ ಬನ್ನಿ.

 

 

ಇವತ್ತು ಬುದ್ಧಿವಂತ ಜನರ ಒಡನಾಟ ಸಿಗುವುದು ಹಾಗೂ ಕೆಲವು ಮಹತ್ತರ ವಿಷಯಗಳನ್ನು ಅರಿಯುವಿರಿ. ಹಾಗಾಗಿ ವರ್ತಮಾನದಲ್ಲಿ ಸುಖ-ಸಂತೋಷ ನೆಮ್ಮದಿಯಿಂದ ಇರುವಿರಿ. ಮನೆಯ ಸದಸ್ಯರ ಸಹಕಾರ ದೊರೆಯುವುದು.

 

ಕೈಕೊಂಡ ಕಾರ್ಯಗಳು ನಿಧಾನಗತಿಯಲ್ಲಿ ಸಾಗಿದರೂ ಅಂತಿಮವಾಗಿ ಯಶಸ್ಸನ್ನು ತಂದು ಕೊಡುತ್ತದೆ. ವ್ಯಾಪಾರದಲ್ಲಿನ ನಷ್ಟ ಸರಿದೂಗಿಸಿಕೊಳ್ಳುವ ಚಾಣಾಕ್ಷ ತನ ಇಂದು ನಿಮಗೆ ಬರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

ಸಾಧ್ಯವಾದಷ್ಟು ನೀವು ನಿಮ್ಮ ಪಾಡಿಗೆ ಇರುವುದು ಕ್ಷೇಮ. ಮನಸ್ಸು ಧಾರ್ಮಿಕ ವಿಚಾರಗಳ ಕಡೆ ಸೆಳೆಯಲಿದ್ದು ಅಂತಹ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ರೈತರು ರಾಜಕೀಯ ವ್ಯಕ್ತಿಗಳನ್ನು ನಂಬದಿರುವುದು ಒಳ್ಳೆಯದು.

 

ಅಂದುಕೊಂಡ ಕೆಲಸಗಳು ಸರಿಯಾದ ಸಮಯಕ್ಕೆ ಕೈಗೂಡಲಿವೆ. ಮಡದಿಗೆ ದೃಷ್ಟಿದೋಷ ಸಂಬಂಧಿ ಸಮಸ್ಯೆ ಕಾಡಲಿದ್ದು ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿ.  ಗುರು ಹಿರಿಯರ ಆಶೀರ್ವಾದ ಪಡೆಯಿರಿ.

 

ಹಣ ನೀರಿನಂತೆ ಖರ್ಚಾಗುವುದು. ಎಲ್ಲ ಖರ್ಚು ಮಾಡಿ ಬರಿಗೈಯಾಗುವ ಸಂಭವವಿದೆ. ಹಣಕಾಸಿನ ವ್ಯವಹಾರದಲ್ಲಿ ತುಂಬಾ ಎಚ್ಚರಿಕೆಯಿಂದ ಇರಿ. ಸಹೋದರರಿಂದ ಸುಖವಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top