fbpx
ಸಮಾಚಾರ

“ಬ್ಯಾಂಕುಗಳ ಶೋಚನೀಯ ಪರಿಸ್ಥಿತಿಗೆ ಮನಮೋಹನ್ ಸಿಂಗ್, ರಘುರಾಂ ರಾಜನ್ ಕಾರಣ” ಕೇಂದ್ರ ಸಚಿವೆ ಸೀತಾರಾಮನ್

ಆರ್.ಬಿ.ಐ ಹಿಂದಿನ ಗವರ್ನರ್ ರಘುರಾಮ್ ರಾಜನ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೇ ದೇಶದ ಬ್ಯಾಂಕ್‍ಗಳ ಶೋಚನೀಯ ಸ್ಥಿತಿಗೆ ಕಾರಣ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಅವರು ನಿನ್ನೆ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಮತ್ತು ಸಾರ್ವಜನಿಕ ವ್ಯವಹಾರಗಳ ವಿಭಾಗದಲ್ಲಿ ಭಾರತದ ಆರ್ಥಿಕ ನೀತಿಗಳ ಬಗ್ಗೆ ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಎಲ್ಲಾ ಸಾರ್ವಜನಿಕ ವಲಯ ಬ್ಯಾಂಕುಗಳಿಗೆ ಚೈತನ್ಯ ತುಂಬುವುದು ತಮ್ಮ ಆದ್ಯತೆಯ ಕೆಲಸವಾಗಿದೆ ಎಂದರು.

‘ರಾಜಕೀಯ ನಾಯಕರ ಫೋನ್‌ ಕರೆಗಳ ಆಧಾರದಲ್ಲಿಯೇ ರಾಜನ್‌ ಅವರ ಕಾಲದಲ್ಲಿ ಬ್ಯಾಂಕುಗಳು ಸಾಲ ನೀಡುತ್ತಿದ್ದವು. ಈ ಸಂಕಷ್ಟದಿಂದ ಪಾರಾಗಲು ಬ್ಯಾಂಕುಗಳು ಈಗ ಸರ್ಕಾರ ನೀಡುವ ಪುನರ್ಧನವನ್ನು ಅವಲಂಬಿಸುವಂತಾಗಿದೆ. ಮನಮೋಹನ್‌ ಅವರು ಆಗ ಪ್ರಧಾನಿಯಾಗಿದ್ದರು. ಭಾರತದ ಬಗ್ಗೆ ಮನಮೋಹನ್‌ ಅವರಿಗೆ ಸ್ಪಷ್ಟ ದೃಷ್ಟಿಕೋನ ಇತ್ತು ಎಂಬುದನ್ನು ರಘುರಾಮ್‌ ಒಪ್ಪಿಕೊಳ್ಳುತ್ತಾರೆ ಎಂಬುದು ನನಗೆ ಖಚಿತವಿದೆ’ ಎಂದು ನಿರ್ಮಲಾ ಹೇಳಿದ್ದಾರೆ.

ಮುಂದುವರಿದು, “ನಾನು ಯಾರ ಬಗ್ಗೆಯೂ ಟೀಕೆ ಮಾಡಲು, ತಮಾಷೆ ಮಾಡಲು ಈ ಮಾತನ್ನು ಹೇಳುತ್ತಿಲ್ಲ. ಮನಮೋಹನ್​ ಸಿಂಗ್​ ಹಾಗೂ ರಾಜನ್​ ಕಾಂಬಿನೇಷನ್​ನಲ್ಲಿ ಬ್ಯಾಂಕ್​ಗಳು ಕಷ್ಟದ ದಿನಗಳನ್ನು ಎದುರಿಸಿದ್ದವು,’ ಎಂದು ಆರೋಪಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top