fbpx
ಸಮಾಚಾರ

ದೀಪಾವಳಿ – ದಿವಾಳಿ ಮಧ್ಯೆ ಸಿಲುಕಿದ ಕನ್ನಡಿಗರು

ದೀಪಗಳ ಹಬ್ಬ , ಅಂಧಕಾರವನ್ನು ಅಳಿಸಿ ಕತ್ತಲಿಂದ ಬೆಳಕಿನ ಕಡೆಗೆ ಜೀವನ ಎಂಬ ಸಂದೇಶವನ್ನು ಸಾರುವ ಹಬ್ಬ , ಗ್ರಾಮೀಣ ಭಾಗದಲ್ಲಿ ಅಚ್ಚ ಕನ್ನಡ ಪದ ಸೊಡರು ಹಬ್ಬ ಎಂದು ಕರೆಯುವ ಪ್ರತೀತಿ ಕೂಡ ಉಂಟು .

ಇತ್ತೀಚಿನ ದಿನಗಳಲ್ಲಿ ಮೂಲ ಕನ್ನಡ ಪದಗಳನ್ನು ಕರ್ನಾಟಕದಿಂದ ಹೊರದೂಡಿ ಹಿಂದಿ ,ಇಂಗ್ಲೀಷ್ ಪದಬಳಕೆಯ ಫ್ಯಾಷನ್ ಹೆಚ್ಚಿದೆ . ಇದಕ್ಕೆ ಸರ್ಕಾರದ ಭಾಷಾ ನೀತಿಯ ಮಲತಾಯಿ ಧೋರಣೆ ಎಷ್ಟಿದೆಯೋ ಅಷ್ಟೇ ನಮ್ಮ IT BT ಕಾರ್ಪೊರೇಟ್ ಮಂದಿಯದ್ದು ಇದೆ .

ಬನ್ನಿ ದಿವಾಳಿ ಪದದ ಅರ್ಥ ನಮ್ಮ ದಿನ ನಿತ್ಯದ ಸಂಗಾತಿ ಗೂಗಲ್ನಲ್ಲಿ ಹುಡುಕೋಣ

14884555_1762664930654994_3837464849493591696_o

2

ನೀವೇ ನಿರ್ಧರಿಸಿ ನಿಮಗೆ ದೀಪಾವಳಿ ಆಚರಿಸಬೇಕೋ ಅಥವಾ ದಿವಾಳಿ ಆಗಬೇಕೋ ??
ನಿರ್ಧಾರ ನಿಮ್ದೇ 🙂

14732141_10154632628158899_2005246716845797031_n

ತಿಳೀತಲ್ವ ಇಷ್ಟು ಗೊತ್ತಾದ್ಮೇಲೂ ನಿಮಗೆ ಯಾರಾದ್ರೂ “ಹ್ಯಾಪಿ ದಿವಾಳಿ ” ಅಂದ್ರೆ ಮೂಲಾಜಿಲ್ಲದೆ ತಿಥಿಯ ಗಡ್ದಪ್ಪನ್ನ ನೆನಸ್ಕೊಂಡು “ಹೋಗು ಹೋಗು ಎಮ್ಮೆ ಮೇಸೋಕೆ ಹೋಗು” ಅದು ದಿವಾಳಿ ಅಲ್ಲ ದೀಪಾವಳಿ ಅಂದ್ಬಿಡಿ .

14581356_1762752643979556_5315900792080125622_n

ಕರ್ನಾಟಕದ ದೀಪಾವಳಿ ಹಾಗೂ ಉತ್ತರ ಭಾರತದ ದಿವಾಳಿಗೂ ಇರುವ ವ್ಯತ್ಯಾಸಗಳು ಬಹಳ ಇವೆ !

ಕರ್ನಾಟಕದಲ್ಲಿ ದೀಪಾವಳಿ ಆಚರಿಸುವ ಪರಿ ಹೀಗಿದೆ ನೋಡಿ

ನೀರು ತುಂಬುವ ಹಬ್ಬದೊಂದಿಗೆ ಶುರುವಾಗುವ ದೀಪಾವಳಿ ನಂತರ ತುಳಸಿಪೂಜೆಯಂದು ಅಂತ್ಯಗೊಳ್ಳುತ್ತದೆ ,
ಕೃಷ್ಣ ಪಕ್ಷದ ೧೩ನೇ ದಿನವಾದ ನೀರು ತುಂಬುವ ಹಬ್ಬ ಈ ದಿನದಂದು ಅಭ್ಯಂಜನ(ಅರಳೆಣ್ಣೆ ) ಸ್ನಾನ ಮಾಡಿ ಮನೆಯಲ್ಲಿನ ಪಾತ್ರೆ ಪಗಡೆಗಳನ್ನು ,ದನ ಕರುಗಳನ್ನು ತೊಳೆದು , ಮನೆಯನ್ನು ತಳಿರು ತೋರಣಗಳಿಂದ ಸಿಂಗಾರ ಮಾಡುತ್ತಾರೆ . ನರಕ ಚತುರ್ದಶಿ , ಅಮಾವಾಸ್ಯೆ , ಬಲಿಪಾಡ್ಯಮಿ ಹೀಗೆ ಮೂರು ದಿನ ವಿಶೇಷವಾಗಿ ಹಬ್ಬ ಆಚರಿಸಲಾಗುತ್ತದೆ

ಹಿಂದಿನ ಪುರಾಣಗಳಲ್ಲಿ ದಾನವನಾದ ನರಕಾಸುರನು ಬ್ರಹ್ಮನಿಂದ ‘ ತನ್ನ ತಾಯಿಯಾದ ಭೂದೇವಿಯಿಂದ ಮಾತ್ರ ತನಗೆ ಸಾವು ಬರುವಂತೆ ವರ ಪಡೆದಿರುತ್ತಾನೆ . ಅವನ ತಾಯಿಯಾದ ಭೂದೇವಿಯೂ ಸಹ ವಿಷ್ಣುವಿನಿಂದ ‘ ತಾನು ಬಯಸಿದಾಗ ಮಾತ್ರ ತನ್ನ ಮಗನಿಗೆ ಸಾವು ಬರಬೇಕು ‘ ಎಂಬ ವರ ಪಡೆದಿರುತ್ತಾಳೆ . ಇದರಿಂದ ಅಟ್ಟಹಾಸದಿಂದ ಮೆರೆಯುತ್ತಾ ೧೬೦೦೦ ಮಹಿಳೆಯರನ್ನು ಸೆರೆಯಲ್ಲಿಡುತ್ತಾನೆ. ಕೃಷ್ಣನ ಹೆಂಡತಿ ಸತ್ಯಭಾಮೆಯು ವಿಷ್ಣುವಿನ ಹೆಂಡತಿ ಭೂದೇವಿಯ ಅವತಾರವಾದ್ದರಿಂದ, ನರಕಾಸುರನನ್ನು ಅವನು ಪಡೆದ ವರದಂತೆಯೇ ಸಂಹರಿಸುತ್ತಾಳೆ .ಆ ದಿನವೇ ನರಕ ಚತುರ್ದಶಿ

ಅಮಾವಾಸ್ಯೆಯ ದಿನ ಲಕ್ಷ್ಮಿ ಪೂಜೆ ಆಚರಿಸುತ್ತಾರೆ

laxmipooje

ವಿಷ್ಣು ವಾಮನನ ಅವತಾರದಲ್ಲಿ ಬಲಿಚಕ್ರವರ್ತಿಯನ್ನು ಸಂಹರಿಸುವ ದಿನವೇ ಬಲಿಪಾಡ್ಯಮಿ ಅಂದಿನ ಸಂಜೆ ಗೋವರ್ಧನ ಪೂಜೆ ಮಾಡುತ್ತಾರೆ,ಸೆಗಣಿಯಿಂದ ಗೋವರ್ಧನಗಿರಿಯಂತೆ ಆಕಾರ ಮಾಡಿ ಹೂವಿನ ಅಲಂಕಾರ ಮಾಡಿ ಪೂಜಿಸುತ್ತಾರೆ . ತಲೆಬಾಗಿಲ ಬಳಿ ನಾಲ್ಕು ಮೂಲಗಳಲ್ಲಿ ಹಾಗೂ ಮಧ್ಯೆ ಸೆಗಣಿಯ ಗಿರಿಯಾಕಾರವನ್ನಿಟ್ಟು , ಸುತ್ತಲೂ ಸೆಗಣಿಯಿಂದ ಕೋಟೆಯಂತೆ ಕಟ್ಟಿ , ಹಾಲನ್ನು ಮಧ್ಯೆ ಇರುವ ಗಿರಿಯಾಕಾರಕ್ಕೆ ಹುಯ್ಯುತ್ತಾ ‘ಬಲೀಂದ್ರ ನ ರಾಜ್ಯ ಹೊನ್ನೋ ಹೊನ್ನು ‘ ಎಂದು ಹಾಲು ಕೋಡಿಯಾಗಿ ಹರಿಯುವಂತೆ ಹುಯ್ದು ಸಮೃದ್ಧಿಯನ್ನು ಹಾರೈಸುತ್ತಾರೆ .

ಕಜ್ಜಾಯ ಸವಿಯುತ್ತಾ , ಸಂಜೆ ದೀಪಗಳನ್ನು ಸಾಲುಸಾಲಾಗಿ ಹಚ್ಚಿ , ಪಟಾಕಿ ಸಿಡಿಸುವುದೂ ಒಂದು ಸಂಭ್ರಮ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top