fbpx
ಸಮಾಚಾರ

ದೊಡ್ಮನೆಯಲ್ಲಿ ಚಿಕ್ಕ ಮಗುವಿನಂತೆ ಗಳಗಳನೆ ಅತ್ತ ರವಿ ಬೆಳಗೆರೆ- ಯಾಕೆ ಗೊತ್ತಾ?

ರವಿ ಬೆಳಗೆರೆ ಎಂದರೆ ಖಡಕ್ ವ್ಯಕ್ತಿ, ಕೋಪಿಷ್ಠ, ನೇರ ನುಡಿ ಎಂಬ ಅಭಿಪ್ರಾಯವೇ ಎಲ್ಲರಲ್ಲೂ ಇದೆ. ಆದ್ರೆ, ನೆನ್ನೆ ಬಿಗ್ ಬಾಸ್ ಮನೆನಲ್ಲಿ ರವಿ ಬೆಳಗೆರೆಯ ಭಾವನಾತ್ಮಕ ಮುಖದ ಅನಾವರಣವಾಯ್ತು. ಬೆಳಗೆರೆ ಅವರು ತಮ್ಮ ತಾಯಿಯೊಂದಿಗೆ ಕಳೆದ ಪ್ರತಿಯೊಂದು ಘಳಿಗೆಯನ್ನು ಸ್ಮರಿಸಿ ಚಿಕ್ಕ ಮಗುವಿನಂತೆ ಅತ್ತು ಬಿಟ್ಟರು.

ಹೌದು, ಬಿಗ್​ ಬಾಸ್​ ಮನೆಯಲ್ಲಿ ನಿನ್ನೆ ತಾಯಿ ಅಥವಾ ತಂದೆ ಬಗ್ಗೆ ಹೇಳಿಕೊಳ್ಳಬೇಕು ಎನ್ನುವ ಆದೇಶ ಬಂದಿತ್ತು. ಅಂತೆಯೇ ಎಲ್ಲರೂ ಒಂದು ಹಾಡನ್ನು ಹೇಳಿ ತಮ್ಮ ತಮ್ಮ ಪಾಲಕರ ಬಗ್ಗೆ ಹೇಳಿಕೊಂಡಿದ್ದರು. ಈ ವೇಳೆ ರವಿ ಬೆಳಗೆರೆ ಕೂಡ ತಮ್ಮ ತಾಯಿ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ತಾಯಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ.

 

 

”ನಾನು ಕೇವಲ ನನ್ನ ಅಮ್ಮನ ಮಗ. ನನ್ನ ತಂದೆ ಯಾರು ಅಂತ ನನಗೆ ಗೊತ್ತಿಲ್ಲ. ನನ್ನ ತಂದೆ ಅಂತ ಏನಿದ್ದ, ಆತ ತೀರಿಕೊಂಡ ನಂತರ ಹುಟ್ಟಿದ ಮಗು ನಾನು. 1958 ರಲ್ಲಿ ತಂದೆ ಇಲ್ಲದೆ, ಗಂಡ ಇಲ್ಲದೆ ಗರ್ಭ ಧರಿಸಿ ಪ್ರಪಂಚಕ್ಕೆ ಒಂದು ಮಗುವನ್ನ ತಂದಾಕೆಯ ಹೆಸರು ಬೆಳಗೆರೆ ಪಾರ್ವತಮ್ಮ.. ‘ಎಲ್ಲರೂ ತಂದೆಯ ಹೆಸರು ಇಟ್ಟುಕೊಳ್ಳುತ್ತಾರೆ. ನಾನು ತಂದೆಯ ಹೆಸರು ಇಟ್ಟುಕೊಂಡಿಲ್ಲ. ನಾನು ತಾಯಿಯ ಮಗ.”

“ನಮಮ್ಮ ಪಾರ್ಶ್ವವಾಯುನಿಂದ ಬಳಲುತ್ತಿದ್ದರು, ಅವರಿಗೆ ನಾನು ಎಲ್ಲ ರೀತಿಯ ಸೇವೆಯನ್ನು ಮಾಡಿದ್ದೇನೆ. ಅಮ್ಮನಿಗೆ ಸಹಾಯ ಆಗಲಿ ಎಂದು 21ನೇ ವಯಸ್ಸಿಗೆ ನಾನು ಮದುವೆ ಮಾಡಿಕೊಂಡೆ. ನಾವಿಬ್ಬರು ನನ್ನ ತಾಯಿಯನ್ನ ತುಂಬಾ ಚೆನ್ನಾಗಿ ನೋಡಿಕೊಂಡ್ವಿ. ಒಮ್ಮೆ ಪೂಜೆ ಮಾಡುವಾಗ ಅಮ್ಮನಿಗೆ ಎರಡನೇ ಬಾರಿ ಅಟ್ಯಾಕ್ ಆಯ್ತು. ಕೆಳಗೆ ಬಿದ್ದ ಕಾರಣ 13 ದಿನ ಕೋಮದಲ್ಲಿದ್ದರು.. ಪ್ರಜ್ಞೆ ಬಂದು ”ರವಿ” ಅಂತ ಕರೆಯಬಹುದೇನೋ ಅಂತ ಇಡೀ ರಾತ್ರಿ ಕಾದಿದ್ದೇನೆ. ಆದರೆ ನಮ್ಮಮ್ಮ ಬೆಳಿಗ್ಗೆ ಸತ್ತು ಹೋಗಿದ್ರು, ನನಗೆ ಒಂದು ಮಾತು ಹೇಳದೇ ಹೋಗ್ಬಿಟ್ರು” ಎಂದು ಹೇಳುತ್ತಾ ಬೆಳಗೆರೆ ಕಣ್ಣೀರು ಹಾಕಿದರು.

ಇಂದು ನಾನು ಕೋಟಿ ಕೋಟಿ ಸಂಪಾದಿಸಿದ್ದೇನೆ. ನನ್ನದೇ ಪತ್ರಿಕೆ ಇದೆ, ಒಂದು ಒಳ್ಳೆಯ ಶಾಲೆಯನ್ನು ಕಟ್ಟಿದ್ದೇನೆ ಆದ್ರೆ, ನನ್ನ ತಾಯಿಯಿಲ್ಲ. ಇದನ್ನ ನೋಡೋಕೆ ನನ್ನ ತಾಯಿ ಇಲ್ಲ. ನನ್ನ ತಾಯಿ ಇದನೆಲ್ಲಾ ನೋಡಬೇಕಿತ್ತು, ಆದರೆ ಈಗ ನಾವೇನೇ ಮಾಡಿದರೂ ತನ್ನ ತಾಯಿ ಬರೋದಿಲ್ಲ. ಅದಕ್ಕೆ ಎಲ್ಲರೂ ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಿ. ಯಾರು ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೋ ಅವರನ್ನ ಬದುಕು ಚೆನ್ನಾಗಿ ನೋಡಿಕೊಳ್ಳುತ್ತೆ” ಎಂದು ಬಿಕ್ಕಿ ಬಿಕ್ಕಿ ಅತ್ತರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top