fbpx
ಸಮಾಚಾರ

ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದೇನು ಗೊತ್ತೇ?

ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅಕ್ಟೋಬರ್ 23 ರಂದು ಬಿಸಿಸಿಐಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ನಡುವೆ ಭಾರತೀಯ ಕ್ರಿಕೆಟ್​ನಲ್ಲಿ ಗಂಗೂಲಿ ಮಹತ್ವದ ಬದಲಾವಣೆ ತರುವ ಯೋಜನೆ ಹಾಕಿಕೊಂಡಂತಿದೆ. ಈ ನಡುವೆ ಭಾರತ ಹಾಗೂ ಪಾಕಿಸ್ತಾನ ನಡುವಣ ಕ್ರಿಕೆಟ್ ಬಾಂಧವ್ಯ ಪುನರಾರಂಭಗೊಳ್ಳಲಿದೆಯೇ ಎಂಬುದು ಬಹಳಷ್ಟು ಕುತೂಹಲವೆನಿಸಿದೆ.

ಈ ಬಗ್ಗೆ ಬಿಸಿಸಿಐ ನಿಯೋಜಿತ ಅಧ್ಯಕ್ಷ ಸೌರವ್ ಗಂಗೂಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಗಂಗೂಲಿ, ಭಾರತ – ಪಾಕಿಸ್ಥಾನ ನಡುವೆ ಕ್ರಿಕೆಟ್ ಸರಣಿ ನಡೆಯಬೇಕೋ ಅಥವಾ ಬೇಡ ಎನ್ನುವುದನ್ನು ನಾವು ನಿರ್ಧಾರ ಮಾಡುವುದಲ್ಲ. ಅದನ್ನು ದೇಶಗಳ ಪ್ರಧಾನ ಮಂತ್ರಿಯವರೇ ನಿರ್ಧರಿಸಬೇಕು. ನೀವು ಈ ಪ್ರಶ್ನೆಯನ್ನು ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಬಳಿಯೇ ಕೇಳಬೇಕು ಎಂದರು.

ಉಭಯ ದೇಶಗಳು ಕೊನೆಯದಾಗಿ 2012 ರಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಕಾಣಿಸಿಕೊಂಡವು, ಆಗ ಭಾರತವು ಪಾಕಿಸ್ತಾನಕ್ಕೆ ಎರಡು ಟಿ 20 ಅಂತರರಾಷ್ಟ್ರೀಯ ಮತ್ತು ಮೂರು ಏಕದಿನ ಪಂದ್ಯಗಳನ್ನು ಒಳಗೊಂಡ ಸೀಮಿತ ಓವರ್‌ಗಳ ಸರಣಿಗೆ ಆತಿಥ್ಯ ವಹಿಸಿತು.

ಸೌರವ್ ಗಂಗೂಲಿ 2004 ರಲ್ಲಿ ಪಾಕಿಸ್ತಾನದ ಐತಿಹಾಸಿಕ ಪ್ರವಾಸದಲ್ಲಿ ಭಾರತವನ್ನು ಮುನ್ನಡೆಸಿದ್ದರು, 1999 ರಲ್ಲಿ ಕಾರ್ಗಿಲ್ ಯುದ್ಧದ ನಂತರದ ಮೊದಲ ದ್ವಿಪಕ್ಷೀಯ ಸರಣಿ ಮತ್ತು 1989 ರಿಂದ ಭಾರತದ ಮೊದಲ ಪಾಕಿಸ್ತಾನ ಭೇಟಿಯಾಗಿತ್ತು. ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪಾಕ್ ಜೊತೆಗಿನ ಸಂಬಂಧದಲ್ಲಿ ಬಿರುಕು ಮೂಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top