fbpx
ಸಮಾಚಾರ

“ಚಿತ್ರರಂಗವೆಂದರೆ ಕೇವಲ ಖಾನ್‍ಗಳಲ್ಲ” ಪ್ರಧಾನಿ ಮೋದಿಗೆ ಚಾಟಿ ಬೀಸಿದ ಜಗ್ಗೇಶ್.

ಮಹಾತ್ಮ ಗಾಂಧಿ 150ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್ ತಾರೆಯರ ಜೊತೆ ಸಂವಾದ ನಡೆಸಿದ್ದಾರೆ. ಬಾಲಿವುಡ್ ನಂತರ ಜೊತೆ ಮೋದಿ ಇರುವ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಾಲಿವುಡ್ ಚಿತ್ರರಂಗಕ್ಕೆ ಸಿಕ್ಕ ಬೆಂಬಲ ಮತ್ತು ಸಹಕಾರ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಸಿಗುತ್ತಿಲ್ಲ ಎಂದು ಅನೇಕರು ಟೀಕಿಸುತ್ತಿದ್ದಾರೆ ಇದೀಗ ಕನ್ನಡ ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

 

 

ಕನ್ನಡಿಗರು ಇಂದು ಬಹುತೇಕ ಪರಭಾಷೆ ಸ್ಟಾರ್ಸ್ ಗಳಿಗೆ ಚಪ್ಪಾಳೆ ಹೊಡೆದ ತಪ್ಪಿಗೆ ನಾವು ಕನ್ನಡಿಗರು ದಾರಿ ತಪ್ಪಿದವರಂತೆ ಆಗಿದ್ದೇವೆ! ನರೇಂದ್ರ ಮೋದಿ ಜಿ , ಉತ್ತರ ಭಾರತದ ನಟ ನಟಿಯರಿಗಿಂತ ನಾವು ಯಾವುದರಲ್ಲೂ ಕಮ್ಮಿ ಇಲ್ಲಾ! ಶಾರೂಖ್ , ಅಮಿರ್ ಅಲ್ಲಾ ಕಲಾರಂಗಕ್ಕೆ ಒಡೆಯರು, ನಮ್ಮ ಕನ್ನಡದ ಕಲಿಗಳು ಅನೇಕರಿದ್ದಾರೆ. ನಿಮ್ಮ ಭಾವನೆ ಗೌರವಿಸಲು , ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.

ಹಾಗೇ ಇನ್ನೊಂದು ಟ್ವೀಟ್​ನಲ್ಲಿ, ಕರ್ನಾಟಕದಲ್ಲಿ ಅತಿಹೆಚ್ಚು ಮನರಂಜನಾ ತೆರಿಗೆ ಸಂಗ್ರಹ ಆಗುವುದು ಚಿತ್ರರಂಗದಿಂದ. ಇದು ನೆನಪಿರಲಿ. ಈ ದೇಶದ ಚಿತ್ರರಂಗ ಬಹುಭಾಷಾ ಭಾವನೆಯಿಂದ ಉಳಿದಿದೆ ವಿನಃ ಹಿಂದಿ ಚಿತ್ರರಂಗದಿಂದ ಅಲ್ಲ. ಈ ವಿಷಯವನ್ನು ಇಡೀ ರಾಷ್ಟ್ರಕ್ಕೆ ಮನವರಿಕೆ ಮಾಡುವ ಕನ್ನಡ ಮನಸುಗಳೇ ಇಲ್ಲವೇ? ತುಂಬ ದುಃಖವಾಯಿತು ಎಂದಿದ್ದಾರೆ. ಅಲ್ಲದೆ ಚಿತ್ರರಂಗವೆಂದರೆ ಖಾನ್​ಗಳಲ್ಲ ಎಂಬುದನ್ನು ಪುನರುಚ್ಚರಿಸಿದ್ದಾರೆ.

 

 

ಏನಿದು ಘಟನೆ:
ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿ ಶನಿವಾರ ಚೇಂಜ್ ವಿಥಿನ್ ಹೆಸರಿನಲ್ಲಿ ಬಾಲಿವುಡ್ ಸೆಲೆಬ್ರಟಿಗಳನ್ನು ಭೇಟಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ಅಮೀರ್ ಖಾನ್, ಕಂಗನಾ ರಣಾವತ್, ಜಾಕ್ವೆಲಿನ್ ಫರ್ನಾಂಡೀಸ್ ಸೇರಿ ಹಲವು ಸಿನಿಮಾ ಹಾಗೂ ಕಿರು ತೆರೆಯ ಗಣ್ಯರು ಭಾಗವಹಿಸಿದ್ದರು. ಈ ವಿಷಯವನ್ನು ಪ್ರಧಾನಿ ಮೋದಿ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top