fbpx
ಸಮಾಚಾರ

ಇಂದೇ ನಡೆಯಲಿದೆ ಚಂದನ್- ನಿವೇದಿತಾ ನಿಶ್ಚಿತಾರ್ಥ! ಇಲ್ಲಿದೆ ಸಂಪೂರ್ಣ ಮಾಹಿತಿ

ಯುವ ದಸರಾದಲ್ಲಿ ಪ್ರಪೋಸ್ ಮಾಡಿ ಸುದ್ದಿಯಾಗಿದ್ದ ನಿವೇದಿತಾ ಗೌಡ- ಚಂದನ್ ಶೆಟ್ಟಿ ಪ್ರೀತಿಗೆ ಇಂದು ನಿಶ್ಛಿತಾರ್ಥದ ಮುದ್ರೆ ಬೀಳಲಿದೆ. ಇಂದು ಮೈಸೂರಿನ ಖಾಸಗಿ ಹೊಟೇಲ್ ವೊಂದರಲ್ಲಿ ಚಂದನ್ – ನಿವೇದಿತಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ನಿಶ್ಚಿತಾರ್ಥ ಸಮಾರಂಭಕ್ಕೆ ಆಪ್ತರು, ಸ್ನೇಹಿತರು, ಬಂದುಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.

 

 

ನಿವೇದಿತಾಗೆ ಚಂದನ್ ಪ್ರೇಮ ನಿವೇದನೆ
‘ಯುವ ದಸರಾ 2019’ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ನೀಡಲು ಆಗಮಿಸಿದ್ದ ಚಂದನ್‌ ಶೆಟ್ಟಿ, ನಿವೇದಿತಾ ಅವರಿಗೆ ವೇದಿಕೆಯಲ್ಲೇ ಉಂಗುರ ಹಾಕಿ ಶೀಘ್ರದಲ್ಲೇ ನಾವಿಬ್ಬರು ಮದುವೆ ಆಗುವುದಾಗಿ ಘೋಷಿಸಿದ್ದರು. ಆ ಮೂಲಕ ಬಿಗ್‌ ಬಾಸ್‌ ಮನೆಯಿಂದ ಹೊರಬಿದ್ದ ಮೇಲೆ ಇಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಗಾಸಿಪ್‌ ನಿಜವಾಗಿಸಿದ್ದರು.

ಅಂದಹಾಗೆ, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 5ರ ಸ್ಪರ್ಧಿ ಆಗಿದ್ದರು. ಇಲ್ಲೇ ಮೊದಲ ಬಾರಿಗೆ ಈ ಇಬ್ಬರು ಭೇಟಿಯಾಗಿದ್ದರು. ಕಾರ್ಯಕ್ರಮದಲ್ಲಿ ಸ್ನೇಹಿತರಾಗಿದ್ದ ಈ ಜೋಡಿ, ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೆ ಪ್ರೇಮಿಗಳಾದರು. ಇವರ ಪ್ರೀತಿಗೆ ಇಬ್ಬರ ಮನೆಯಲ್ಲಿಯೂ ಒಪ್ಪಿಗೆ ಸಿಕ್ಕಿದ್ದು, ಇದೀಗ ನಿಶ್ಚಿತಾರ್ಥಕ್ಕೆ ಸಜ್ಜಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top